ಚಾಮರಾಜನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ನಡೆದ ನೂತನ ಜಿಲ್ಲಾ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾರತ ಮಾತೆ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಮಾಜಿ ಅಧ್ಯಕ್ಷರಾದ ಸೋಮಶೇಖರ್ ಬಿಸಲವಾಡಿ ಮಾತನಾಡಿ ನೂತನ ಅಧ್ಯಕ್ಷರಿಗೆ ಶುಭ ವಾಗಲಿ ಮತ್ತು ನೂತನ ಅಧ್ಯಕ್ಷರು ಚುನಾವಣೆಯ ಸಂದರ್ಭದಲ್ಲಿ ಕರಪತ್ರದ ಮೂಲಕ ಪರಿಷತ್ ಮಂದಿರಗಳನ್ನು ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ. ಮತ್ತು ಎಲ್ಲಾ ತಾಲೂಕುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಟ್ಟಡಗಳನ್ನು ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಮುಂದಿನ ಬರುವ ಆಗಸ್ಟ್ಗೆ ೨೫ ವರ್ಷ ಆಗಲಿದೆ ಹಾಗಾಗಿ ೨೫ನೇ ವರ್ಷದ ಬೆಳ್ಳಿ ಹಬ್ಬವನ್ನು ಜಿಲ್ಲಾಕೇಂದ್ರ ಚಾಮರಾಜನಗರದಲ್ಲಿ ಮಾಡಬೇಕೆಂದು ಈ ಮೂಲಕ ನೂತನ ಅಧ್ಯಕ್ಷರಿಗೆ ತಿಳಿಸುತ್ತೇನೆ ಎಂದರು
ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾದ ಎಂ .ಶೈಲಾ ಕುಮಾರ್ ಮಾತನಾಡಿ ನನಗೆ ಮತನೀಡಿ ನನ್ನನ್ನು ಆಯ್ಕೆ ಮಾಡಿರುವ ಎಲ್ಲಾ ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ನನ್ನ ನಮಸ್ಕಾರಗಳು ಮತ್ತು ಸೋಮಶೇಖರ್ ಬಿಸಲವಾಡಿ ರವರು ಮಾತನಾಡಿ ಸವಾಲುಗಳನ್ನು ತಿಳಿಸಿದ್ದಾರೆ. ಅವರು ಹೇಳಿರುವ ಹಾಗೆ ಎಲ್ಲವನ್ನು ಮಾಡೋಣ ಯಾರು ಇಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ ಹಾಗೆ ನೀವು ಕೊಟ್ಟಿರುವ ಅಧಿಕಾರವಲ್ಲ ಇದು ಜವಾಬ್ದಾರಿ ಹಾಗಾಗಿ ನೀವು ಸಹಕಾರ ಕೊಡಬೇಕು. ಕನ್ನಡ ಸಾಹಿತ್ಯಪರಿಷತ್ತಿನ ಉದ್ದೇಶ ಅಂದರೆ ಕಲೆ ಸಾಹಿತ್ಯ ಸಂಸ್ಕೃತಿ ಜಾನಪದ ಇದರ ರಕ್ಷಣೆ ಮತ್ತು ವಿಸ್ತರಣೆ ಮತ್ತು ಅಭಿವೃದ್ಧಿಯತ್ತ ಗಮನ ಹರಿಸೋಣ ಯಾವುದಕ್ಕೂ ಚುತಿ ಬಾರದೆ ಹಾಗೆ ನೋಡಿಕೊಳ್ಳೋಣ ಎಂದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಿಗೆ ಕನ್ನಡ ಸಾಹಿತ್ಯ ಪ್ರೇಮಿಗಳು ಮತ್ತು ಅಭಿಮಾನಿಗಳು ಸನ್ಮಾನಿಸಿದರು
ಈ ಸಂದರ್ಭದಲ್ಲಿ ಮಾಜಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರುಗಳಾದ ಸೋಮಶೇಖರ್ ಬಿಸಲವಾಡಿ, ಬಿಎಸ್ ವಿನಯ್, ನಾಗಮಲ್ಲಪ್ಪ, ಮತ್ತು ನೂತನ ಜಿಲ್ಲಾಧ್ಯಕ್ಷರಾದ ಎಂ ಶೈಲಾ ಕುಮಾರ್, ಬಾಲಸುಬ್ರಮಣ್ಯಂ, ಬಾಲರಾಜು , ಗವಿಸ್ವಾಮಿ, ಚಿದಾನಂದ ,ನಾಗರಾಜು, ನಾಗರಾಜ ಶರ್ಮ , ಬ್ರಹ್ಮಾನಂದ, ಇನ್ನು ಮುಂತಾದ ಅನೇಕ ಕನ್ನಡ ಸಾಹಿತ್ಯ ಪ್ರೇಮಿಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಹ ನಿರ್ದೇಶಕರು ಹಾಜರಿದ್ದರು.
ವರದಿ: ಸದಾನಂದ ಕಣ್ಣೇಗಾಲ ಗುಂಡ್ಲುಪೇಟೆ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.