December 22, 2024

Bhavana Tv

Its Your Channel

ಕಾವಲುಪಡೆಯ ವತಿಯಿಂದ ಸೇನಾಪಡೆಯ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ರವರಿಗೆ ಮತ್ತು ೧೩ ಜನ ಸೇನಾನಿಗಳಿಗೆ ಮೇಣದಬತ್ತಿ ಹಚ್ಚುವ ಮುಖಾಂತರ ಶ್ರದ್ಧಾಂಜಲಿ

ಗುಂಡ್ಲುಪೇಟೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಕಾವಲುಪಡೆಯ ಸಂಘಟನೆಯ ವತಿಯಿಂದ ಭಾರತ ದೇಶದ ಗೌರವಾನ್ವಿತ ೩ ಸೇನಾಪಡೆಯ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ರವರಿಗೆ ಮತ್ತು ೧೩ ಜನ ಸೇನಾನಿ ಗಳಿಗೆ ಮೇಣದಬತ್ತಿ ಹಚ್ಚುವ ಮುಖಾಂತರ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಮಾತನಾಡಿದ ಆರಕ್ಷಕ ಉಪ ನಿರೀಕ್ಷಕರಾದ ಜೆ. ರಾಜೇಂದ್ರ ಮಾತನಾಡಿ ಬಿಪಿನ್ ರಾವತ್ ಅವರ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕರಾದ ಸುಭಾಷ್ ಮಾಡ್ರಳ್ಳಿ ಮಾತನಾಡಿ ವಾಯುಪಡೆ ಸೇನಾಪಡೆ ನೌಕಾಪಡೆಯ ಮುಖ್ಯಸ್ಥರು ನೆನ್ನೆ ತಮಿಳುನಾಡಿನಲ್ಲಿ ದುರಂತಕ್ಕೆ ಸಿಕ್ಕಿ ಸಾವನ್ನಪ್ಪಿದ್ದಾರೆ ಅವರಿಗೆ ಗೌರವಪೂರ್ಣವಾಗಿ ಶ್ರದ್ಧಾಂಜಲಿ ಸಲ್ಲಿಸೋಣ ಎಂದರು.

ನAತರ ಮಾತನಾಡಿದ ತಾಲೂಕು ಕಾವಲುಪಡೆಯ ಅಧ್ಯಕ್ಷರಾದ ಅಬ್ದುಲ್ ಮಾತನಾಡಿ ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ರವರು ಮತ್ತು ೧೩ ಜನ ಸೇನಾನಿಗಳು ನೆನ್ನೆ ಮರಣವನ್ನು ಹೊಂದಿದ್ದಾರೆ ಅವರುಗಳ ಕುಟುಂಬಕ್ಕೆ ಶಾಂತಿ ನೀಡಲಿ ಮತ್ತು ಅವರಿಗೆ ಗೌರವಪೂರ್ಣವಾಗಿ ಶ್ರದ್ಧಾಂಜಲಿ ಸಲ್ಲಿಸೋಣ ಎಂದರು

ಈ ಸಂದರ್ಭದಲ್ಲಿ ಕಾವಲು ಪಡೆಯ ಜಿಲ್ಲಾ ಕಾರ್ಯಾಧ್ಯಕ್ಷರಾದ ಅಬ್ದುಲ್ ರಶೀದ್ ,ವೆಂಕಟೇಶ್ ಗೌಡ್ರು, ಇಲಿಯಸ್ ,ಮುಬಾರಕ್, ರವಿಕುಮಾರ್ ,ಮಿಮಿಕ್ರಿ ರಾಜು, ರೈತ ಮುಖಂಡರುಗಳು ಆರಕ್ಷಕ ಸಿಬ್ಬಂದಿಯವರು ಇನ್ನು ಮುಂತಾದವರಿದ್ದರು.
ವರದಿ: ಸದಾನಂದ ಕನ್ನೇಗಾಲ ಗುಂಡ್ಲುಪೇಟೆ

error: