December 22, 2024

Bhavana Tv

Its Your Channel

ಗುಂಡ್ಲುಪೇಟೆಯಲ್ಲಿ ನವೋದಯ ಪರೀಕ್ಷೆಗೆ ಸಂಬOಧಿಸಿದOತೆ ಒಂದು ದಿನದ ಕಾರ್ಯಾಗಾರ

ಗುಂಡ್ಲುಪೇಟೆ ಪಟ್ಟಣದ ಬಿಇಒ ಕಚೇರಿಯ ಪಕ್ಕದಲ್ಲಿರುವ ಜ್ಞಾನ ಭವನಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಪನಿರ್ದೇಶಕರಾದ ಎಸ್. ಎನ್. ಮಂಜುನಾಥ್ ಮಾತನಾಡಿತಾಲೂಕಿನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣ ಆಗಬೇಕು. ಎಂಬ ಉದ್ದೇಶದಿಂದ ಕಾರ್ಯಗಾರವನ್ನು ನಡೆಸಲಾಗುತ್ತದೆ ಮತ್ತು ನವೋದಯ ಪರೀಕ್ಷೆಗೆ ಮಕ್ಕಳನ್ನು ಹೇಗೆ ಸಿದ್ಧಪಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಹಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ಒಂದು ದಿನದ ಕಾರ್ಯಕ್ರಮ ನಡೆಸಲಾಯಿತು.ಅಲ್ಲದೆ ಶಿಕ್ಷಕರಿಗೆ ಅಗತ್ಯ ಮಾರ್ಗದರ್ಶನವನ್ನು ನೀಡಿದರು

ಈ ಸಂದರ್ಭದಲ್ಲಿ ಜಿಲ್ಲಾ ಉಪನಿರ್ದೇಶಕರಾದ ಎಸ್ ಎನ್ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ ಶಿವಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಿವಪ್ರಸಾದ್, ಕಾರ್ಯದರ್ಶಿ ರವೀಂದ್ರ, ನೋಡಲ್ ಅಧಿಕಾರಿಯಾದ ಮಲ್ಲಿಕಾರ್ಜುನಸ್ವಾಮಿ, ಹಾಗೂ ನೂರಾರು ಶಿಕ್ಷಕರು ಉಪಸ್ಥಿತರಿದ್ದರು

ವರದಿ: ಸದಾನ೦ದ ಕಣ್ಣೆಗಾಲ ಗುಂಡ್ಲುಪೇಟೆ

error: