ಗುಂಡ್ಲುಪೇಟೆ .ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕರ್ನಾಟಕದ ಕನ್ನಡ ಧ್ವಜವನ್ನು ಸುಟ್ಟುಹಾಕಿದ ಕಿಡಿಗೇಡಿಗಳನ್ನು ಬಂಧಿಸುವoತೆ ಹಾಗೂ ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸುವಂತೆ ಅಖಿಲ ಭಾರತ ಕರುನಾಡ ಯುವಶಕ್ತಿ ಸಂಘಟನೆ ಗುಂಡ್ಲುಪೇಟೆ ತಾಲೂಕು ವತಿಯಿಂದ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಕರುನಾಡ ಯುವಶಕ್ತಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಅಶೋಕ ರಾಜ್ ಮಾತನಾಡಿ ಬೆಳಗಾವಿಗೆ ಬಂದು ಎಂ ಇಎಸ್ ಪುಂಡರುಗಳು ಈ ರೀತಿ ಧ್ವಜವನ್ನು ಸುಟ್ಟು ಹಾಕಿ ಕ್ರೌರ್ಯವನ್ನು ಮೆರೆದಿದ್ದಾರೆ ಹಾಗಾಗಿ ಆ ಕಿಡಿಗೇಡಿಗಳಿಗೆ ಶಿಕ್ಷೆ ಆಗಲೇಬೇಕು ಎಂದು ಈ ಮೂಲಕ ಆಕ್ರೋಶ ವ್ಯಕ್ತಪಡಿಸಿದರು
ನಂತರ ಮಾತನಾಡಿದ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕರಾದ ಸುಭಾಷ್ ಮಾತನಾಡಿ ಬೆಳಗಾವಿಯಲ್ಲಿ ಅಧಿವೇಶನ ಶುರುವಾಗಿದ್ದಾಗಿನಿಂದ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಧ್ವಜವನ್ನು ಸುಟ್ಟುಹಾಕಿ ಕರ್ನಾಟಕದ ಏಳು ಕೋಟಿ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಇಂತಹನೀಚ ಹೇಡಿತನವನ್ನು ಮಾಡಿರುವ ಪುಂಡರನ್ನುಕೂಡಲೇ ಬಂಧಿಸಬೇಕು. ಇದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಕಠಿಣ ಶಿಕ್ಷೆ ನೀಡಬೇಕು ಎಂದರು
ಈ ಸಂದರ್ಭದಲ್ಲಿ ಅಖಿಲ ಭಾರತ ಕರುನಾಡ ಯುವಶಕ್ತಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಅಶೋಕ್ ರಾಜ್, ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಮಂಜು, ತಾಲೂಕು ಅಧ್ಯಕ್ಷರಾದ ಮುನೀರ್ ಪಾಷಾ, ತಾಲೂಕು ಯುವ ಘಟಕದ ಅಧ್ಯಕ್ಷರಾದ ಮಂಜುನಾಥ್, ಕೂಲಿ ಕಾರ್ಮಿಕ ಘಟಕದ ಅಧ್ಯಕ್ಷ ಅಡ್ದು, ಗೌತಮ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕರಾದ ಸುಭಾಷ್ ಮಾಡ್ರಳ್ಳಿ, ತಾಲೂಕು ಕಾವಲುಪಡೆ ಅಧ್ಯಕ್ಷರಾದ ಅಬ್ದುಲ್ ಮಾಲಿಕ್, ಹಿರಿಯ ಕನ್ನಡ ಪರ ಹೋರಾಟಗಾರರಾದ ಬ್ರಹ್ಮಾನಂದ, ಸಾಹಿತಿ ಕಾಳಿಂಗ ಸ್ವಾಮಿ, ಮನಸ್, ಪ್ರಕಾಶ್ , ಮಾದೇವಸ್ವಾಮಿ, ಇನ್ನು ಮುಂತಾದ ಕನ್ನಡ ಪರ ಸಂಘಟನೆಗಳು ಇದ್ದರು
ವರದಿ: ಸದಾನ೦ದ ಕನ್ನೇಗಾಲ ಗುಂಡ್ಲುಪೇಟೆ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.