ಗುಂಡ್ಲುಪೇಟೆ ತಾಲೂಕಿನ ಕಚೇರಿಯಲ್ಲಿ ನಡೆದ ಎಸ್ಸಿಎಸ್ಟಿ ಹಿತರಕ್ಷಣಾ ಸಭೆಯಲ್ಲಿ ಅಧಿಕಾರಿಗಳನ್ನು ದಲಿತ ಸಂಘರ್ಷ ಸಮಿತಿಯ ಮುಖಂಡರುಗಳು ತರಾಟೆಗೆ ತೆಗೆದುಕೊಂಡರು. ಎಸ್ಸಿ ಎಸ್ಟಿ ಅಭಿವೃದ್ಧಿ ಅಧಿಕಾರಿ ಸೋಮಣ್ಣ ರವರನ್ನು ಡಿಎಸ್ ಎಸ್ ಮುಖಂಡರರಾದ ನಂಜುAಡಸ್ವಾಮಿ ಮತ್ತು ಚಲವಾದಿ ಸೋಮಣ್ಣ ತರಾಟೆಗೆ ತೆಗೆದುಕೊಂಡರು. ನಂತರ ಉತ್ತರ ಕೊಡದೆ ಅಧಿಕಾರಿ ಸೋಮಣ್ಣ ತಬ್ಬಿಬ್ಬಾದರು.ಇದಕ್ಕೆ ಮಧ್ಯಪ್ರವೇಶ ಮಾಡಿದ ತಾಲ್ಲೂಕು ದಂಡಾಧಿಕಾರಿಗಳ ಮತ್ತು ಎಸ್ಸಿಎಸ್ಟಿ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷರಾದ ರವಿ ಶಂಕರ್ ಅವರು ಈ ಸೋಮಣ್ಣ ಎಂಬುವವರನ್ನು ನಾವು ನೋಡೇ ಇಲ್ಲ ಎಂದರು. ಮತ್ತು ಸಮಾಜ ಕಲ್ಯಾಣ ಅಧಿಕಾರಿ ಗಳಿಗೆ ಸ್ಥಳವಕಾಶ ನೀಡುವಂತೆ ದಂಡಾಧಿಕಾರಿಗಳು ಸೂಚಿಸಿದರು. ನಂತರ ಕೆಆರ್ ಐಡಿಎಲ್ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಗುರುಲಿಂಗಯ್ಯ ನವರಿಗೆ. ಮುತ್ತಣ್ಣ ಮಾತನಾಡಿ ನೀವು ಎಸ್ಸಿಎಸ್ಟಿ ಅನುದಾನ ೧೨೦,೦೦,೦೦೦ ಬಿಡುಗಡೆಯಾಗಿದ್ದು. ಅದನ್ನು ಸರಿಯಾದ ರೀತಿಯಲ್ಲಿ ಖರ್ಚುಮಾಡದೆ ದುರುಪಯೋಗ ಮಾಡಿದ್ದೀರಿ ಎಂದರು. ನಂತರ ಉತ್ತರ ಕೊಡದೆ ಅಧಿಕಾರಿ ಮುಂದಿನ ಸಭೆಯಲ್ಲಿ ತಿಳಿಸುತ್ತೇನೆ ಎಂದು ನುಣುಚಿಕೊಂಡರು.
ಮಾನವ ಹಕ್ಕು ಸಮಿತಿಯ ಜಿಲ್ಲಾಧ್ಯಕ್ಷರಾದ ನಾಗೇಂದ್ರ ಅವರು ಮಾತನಾಡಿ ಕಳೆದ ಹತ್ತು ವರ್ಷದಲ್ಲಿ ಅಣ್ಣೂರು ಕೇರಿ ಶಿವಕುಮಾರ್ ಎಂಬುವವರು ಎಸ್. ಬಿ ಐ .ನಲ್ಲಿಸಾಲವನ್ನು ತೆಗೆದುಕೊಂಡಿರುತ್ತಾರೆ. ಆದರೆ ಆ ಸಮಯದಲ್ಲಿ ತೆಗೆದುಕೊಂಡಿರುವ ಅವರ ಎಲ್ಲ ಸಾಲಮನ್ನಾ ಆಗಿದೆ ಇವರದ್ದು ಮಾತ್ರ ಮನ್ನ ಆಗಿಲ್ಲ ಏಕೆ ಎಂದು ಪ್ರಶ್ನಿಸಿದರು.
ಅದಕ್ಕೆ ಉತ್ತರಿಸಿದ ಬ್ಯಾಂಕಿನ ವ್ಯವಸ್ಥಾಪಕರು ಪರಿಶೀಲನೆ ಮಾಡುತ್ತೇನೆ ಎಂದರು
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳು, ಎಸ್ಸಿಎಸ್ಟಿ ಹಿತರಕ್ಷಣಾ ಸಮಿತಿಯ, ಸದಸ್ಯರಾದ ಬಸವರಾಜು, ಬ್ರಹ್ಮಾನಂದ, ಡಿಎಸ್‌ಎಸ್ ನಂಜುAಡಸ್ವಾಮಿ, ರಂಗಸ್ವಾಮಿ, ಮಾನವ ಬಂಧುತ್ವ ವೇದಿಕೆ ಸೋಮಣ್ಣ, ಸುಭಾಷ್, ಸಿಸಿ ದೇವರಾಜ್, ಮುತ್ತಣ್ಣ, ಹನುಮಂತ ರಾಜು, ಮಾನವ ಹಕ್ಕು ಸಮಿತಿಯ ಜಿಲ್ಲಾಧ್ಯಕ್ಷರಾದ ನಾಗೇಂದ್ರ, ಪಾಪಣ್ಣ, ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಎಸ್ಸಿಎಸ್ಟಿ ಹಿತರಕ್ಷಣಾ ಸಮಿತಿಯ ಮುಖಂಡರುಗಳು ಹಾಜರಿದ್ದರು
ವರದಿ ಸದಾನಂದ ಕನ್ನೆಗಾಲ ಗುಂಡ್ಲುಪೇಟೆ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.