ಗುಂಡ್ಲುಪೇಟೆ ತಾಲೂಕಿನ ನೇನೇಕಟ್ಟೆ ಗ್ರಾಮದಲ್ಲಿ ಜಿಲ್ಲಾಧಿಕಾರಿಯವರ ನಡೆ ಹಳ್ಳಿಗಳ ಕಡೆ, ಕಾರ್ಯಕ್ರಮದಲ್ಲಿ ಶಾಸಕರಾದ ಸಿ.ಎಸ್ .ನಿರಂಜನ್ ಕುಮಾರ್ ಸ್ಥಳೀಯಕಾರ್ಯಕರ್ತರನ್ನು ನಿರ್ಲಕ್ಷಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಗುಂಡ್ಲುಪೇಟೆ ; ತಾಲೂಕಿನ ನೇನೇಕಟ್ಟೆ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ಯವರ ನಡೆ ಹಳ್ಳಿಗಳ ಕಡೆ ಎಂಬ ವಿನೂತನ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕರಾದ ಸಿಎಸ್ ನಿರಂಜನ್ ಕುಮಾರ್ ರವರು ಉದ್ಘಾಟಿಸಿದರು. ನಂತರ ತಾಲೂಕು ದಂಡಾಧಿಕಾರಿ ಯಾದ ರವಿಶಂಕರ್ ಅವರು ಮಾತನಾಡಿ ಸಾರ್ವಜನಿಕರು ತಾಲೂಕು ಕಚೇರಿಗೆ ಮತ್ತು ಜಿಲ್ಲಾ ಕಚೇರಿಗೆ ತಮ್ಮ ತಮ್ಮ ಕೆಲಸಕ್ಕೆ ಅಲೆಯಬಾರದು ಎಂದು ಸರ್ಕಾರ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಅದರಂತೆ 60 ವರ್ಷ ಮೇಲ್ಪಟ್ಟವರಿಗೆ ವೃದ್ಧಾಪ್ಯ ವೇತನ, ಪೋತಿ ಖಾತೆ ಮಾಡಿಸುವುದು, ಸ್ಮಶಾನ ಇಲ್ಲದಿರುವ ಕಡೆ ಸ್ಮಶಾನ ಮಂಜೂರಾತಿ ಮಾಡಿಸುವುದು, ಸಾಗುವಳಿ ಪತ್ರ ನೀಡುವುದು, ಹೀಗೆ ಅನೇಕ ರೀತಿಯ ಅನುಕೂಲಗಳನ್ನು ಸರ್ಕಾರ ಜಾರಿಗೆ ತಂದಿದೆ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಸಿ.ಎಸ್ .ನಿರಂಜನ್ ಕುಮಾರ್ ರವರು ಸ್ಥಳೀಯಕಾರ್ಯಕರ್ತರನ್ನು ನಿರ್ಲಕ್ಷಿಸುತ್ತಿರುವುದಕ್ಕೆ ಮಾಡ್ರಳ್ಳಿ ನಾಗೇಂದ್ರ ಕಿಡಿಕಾರಿದ್ದಾರೆ. ಸಕ್ರಿಯ ಕಾರ್ಯಕರ್ತರನ್ನು ಕಡೆಗಣಿಸಿರುವುದಕ್ಕೆ ತೀವ್ರವಾಗಿ ಖಂಡಿಸಿದ್ದಾರೆ. ನಮ್ಮ ನೇನೇಕಟ್ಟೆ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬಿಜೆಪಿಯ ಬೋರ್ಡ್ ತರಲು ಹಗಲು-ರಾತ್ರಿ ಶ್ರಮಿಸಿದ ಕಾರ್ಯಕರ್ತರನ್ನ ಶಾಸಕರು ಮರೆತುಬಿಟ್ಟೂ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಎಂಬ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಎಂದು ಸುದ್ದಿಗಾರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಮಾಡ್ರಳ್ಳಿ ನಾಗೇಂದ್ರ, ಮಲ್ಲೇಶ, ಮಳವಳ್ಳಿ ಮಹೇಶ್, ಪರಮೇಶ್ವರಪ್ಪ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ವೀರನಪುರ, ಎಂ.ಪಿ .ಮಹದೇವಪ್ಪ ನೇನೇಕಟ್ಟೆ, ಸ್ವಾಮಿ. ಬಿಜೆಪಿಯ ಮುಖಂಡರುಗಳಾದ ಮಾಡ್ರಳ್ಳಿ ಮಲ್ಲೇಶ್, ಚಿಕ್ಕಣ್ಣ, ಗೌಡಿಕೆ ಮಹೇಶ್ ಮುಂತಾದವರು ಉಪಸ್ಥಿತರಿದ್ದರು.
ವರದಿ; ಸದಾನಂದ ಕನ್ನೇಗಾಲ, ಗುಂಡ್ಲ ಪೇಟೆ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.