December 22, 2024

Bhavana Tv

Its Your Channel

ಕನ್ನೇಗಾಲ ಗ್ರಾಮ ಪಂಚಾಯತಿ ವತಿಯಿಂದ ವಾರ್ಡ್ ಸಭೆ

ಗುಂಡ್ಲುಪೇಟೆ . ತಾಲೂಕಿನ ಕನ್ನೇಗಾಲ ಗ್ರಾಮ ಪಂಚಾಯತಿ ಆವರಣದಲ್ಲಿ ವಾರ್ಡ್ ಸಭೆ ನಡೆಯಿತು. ಇದರ ನೇತೃತ್ವವನ್ನು ವಹಿಸಿದ ಗ್ರಾಮ ಪಂಚಾಯತಿ ಸದಸ್ಯರಾದ ಜಿ .ನಾಗು ಸ್ವಾಮಿ ರವರ ಸಮ್ಮುಖದಲ್ಲಿ ನಡೆಯಿತು ಸರ್ಕಾರದ ಸುತ್ತೋಲೆ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯಿತಿ ಇವರ ಆದೇಶದಂತೆ 2021_2022ನೇ ಸಾಲಿನ ಬಸವ ವಸತಿ ಮತ್ತು ಡಾ.ಅಂಬೇಡ್ಕರ್ ನಿವಾಸ್ ವಸತಿ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಕನ್ನೇಗಾಲ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಜುಳ ದೊರೆಸ್ವಾಮಿ, ಉಪಾಧ್ಯಕ್ಷರಾದ ಲಕ್ಷ್ಮಮ್ಮ, ಸದಸ್ಯರಾದ ಜಿ ನಾಗು ಸ್ವಾಮಿ, ಸರಸಮ್ಮ, ಗೋಪಮ್ಮ ಹಾಗೂ ಯುವ ಮುಖಂಡ ಮಾದೇಶ್, ಪಾಲಾಕ್ಷ್ ಸ್ವಾಮಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ವರದಿ :ಸದಾನಂದ ಕನ್ನೇಗಾಲ

error: