December 22, 2024

Bhavana Tv

Its Your Channel

ಜಯ ಕರ್ನಾಟಕ ಸಂಘಟನೆ ವತಿಯಿಂದ ಸೈಕಲ್ ಜಾಥದ ಮೂಲಕ ಕನ್ನಡ ಶಾಲೆ ಉಳಿಸಿ ಅಭಿಯಾನ

ಗುಂಡ್ಲುಪೇಟೆ:-ಕಣ್ಮರೆಯ ಅಂಚಿನಲ್ಲಿ ಇರುವ ಸರ್ಕಾರಿ ಶಾಲೆ ಉಳಿಸಿ ಸೈಕಲ್ ಜಾಥವನ್ನು ನಡೆಸಿಕೊಂಡು ಬಂದು ತುಮಕೂರಿನಿಂದ ಗುಂಡ್ಲುಪೇಟೆ ಗೆ ಸರ್ಕಾರಿ ಶಾಲೆಗಳನ್ನು ಉಳಿಸುವಂತೆ ಜಯಕರ್ನಾಟಕ ಸಂಘಟನೆಯ ತುಮಕೂರಿನ ರಾಹುಲ್ ಹಾಗೂ ಕೇರಳದ ಅರುಣ್.ಪಿ ರಾಜು ಎಂಬುವವರು ಸುಮಾರು ಆರು ಸಾವಿರ ಕಿಲೋಮೀಟರುಗಳ ಸೈಕಲ್ ಜಾಥಾ ಹಮ್ಮಿಕೊಂಡಿದ್ದು ೬ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನೂ ಭೇಟಿ ಮಾಡಿ ಮನವಿ ಸಲ್ಲಿಸಿ ಮುಂದಿನ ಜಿಲ್ಲೆಗೆ ತೆರಳುವ ಸಂದರ್ಭದಲ್ಲಿ ಗುಂಡ್ಲುಪೇಟೆಯ ಜಯಕರ್ನಾಟಕ ಸಂಘಟನೆ ಹಾಗೂ ಅಂಬೇಡ್ಕರ್ ಸೇನೆ ಸಂಘಟನೆ ಯವರು ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಇಬ್ಬರನ್ನು ಸನ್ಮಾನಿಸಿ ನಂತರ ಗೋವಿಂದ ನಾಯಕ್ ಮಾತನಾಡಿ ಶಿಕ್ಷಣ ಪ್ರತಿಯೊಂದು ಮಗುವಿನ ಜನ್ಮಸಿದ್ಧ ಹಕ್ಕು ಇಂದು ಶಿಕ್ಷಣ ಒಂದು ವ್ಯಾಪಾರವಾಗಿ ಬದಲಾವಣೆಯಾಗಿದ್ದು ಬಡವರಿಗೆ ಕೈಗೆಟುಕದ ಸ್ಥಿತಿಗೆ ತಲುಪಿದೆ ಅಲ್ಲದೆ ಸರ್ಕಾರಿ ಶಾಲೆಗಳು ಹಲವೆಡೆ ಮುಚ್ಚುತ್ತಿರುವುದು ಆತಂಕಕ್ಕೀಡಾಗಿದೆ. ಇಂತಹ ಸಮಯದಲ್ಲಿ ರಾಹುಲ್ ಹಾಗೂ ಅರುಣ್ ರವರು ಸರ್ಕಾರಿ ಶಾಲೆಗಳನ್ನು ಉಳಿಸುವುದಕ್ಕೆ ಅಭಿಯಾನ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಅವರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಯಕರ್ನಾಟಕ ತಾಲೂಕು ಅಧ್ಯಕ್ಷರಾದ ಮಾಡ್ರಹಳ್ಳಿ ಮಹೇಶ್, ಗೌರವಾಧ್ಯಕ್ಷರಾದ ಕ್ರೇಜಿ ನಾಗರಾಜ್,ಮಲ್ಲೇಶ್ ಸಾದಿಕ್ ಪಶ ,ಚಂದ್ರು ,ಲೋಕೇಶ್, ಹಾಗೂ ಅಂಬೇಡ್ಕರ್ ಸೇನೆಯ ತಾಲೂಕು ಅಧ್ಯಕ್ಷರಾದ ದೀಪಕ್, ಯಶ್ವಂತ್, ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಸಾಹುಲ್ ಹಾಗೂ ಇತರರು ಉಪಸ್ಥಿತರಿದ್ದರು.

ವರದಿ: ಸದಾನಂದ ಕನ್ನೇಗಾಲ

error: