December 22, 2024

Bhavana Tv

Its Your Channel

ಕರ್ನಾಟಕ ರಾಜ್ಯ ಮೂಲಭೂತ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಮಿತಿ ವತಿಯಿಂದ 73 ನೇ ಗಣರಾಜ್ಯೋತ್ಸವ ಆಚರಣೆ

ಗುಂಡ್ಲುಪೇಟೆ ಪಟ್ಟಣದ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ಮೂಲಭೂತ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ವತಿಯಿಂದ 73ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಲಕ್ಷ್ಮಿ ಮಹೇಶ್ ಧ್ವಜಾರೋಹಣವನ್ನು ನೆರವೇರಿಸಿದರು.ನಂತರ ಮಾತನಾಡಿದ ಅವರು ಭಾರತ ಒಂದು ದೊಡ್ಡ ದೇಶವಾಗಿದ್ದು. ಶ್ರೇಷ್ಠ ಸಂವಿಧಾನವನ್ನು ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ನಮಗೆ ನೀಡಿದ್ದಾರೆ ಹಾಗಾಗಿ ಅಂತಹ ಮಹಾನ್ ವ್ಯಕ್ತಿಗಳನ್ನು ಇಂದು ಸ್ಮರಿಸೋಣ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ಸದಸ್ಯರಾದ ಮಾಡ್ರಹಳ್ಳಿ ಮಹೇಶ್, ತಾಲೂಕು ಅಧ್ಯಕ್ಷರಾದ ವಾಸು ಕಿಲಗೆರೆ,ತಾಲೂಕು ಸಂಚಾಲಕರಾದ ಶಿವಪುರ ಕೃಷ್ಣ,ಮತ್ತು
ಮನೋಜ್, ಖಜಾಂಚಿ ಲಕ್ಕೂರು ನಾಗರಾಜ್, ತಾಲೂಕು ಅಧ್ಯಕ್ಷ ಬಾಲು ,ಸುವರ್ಣಮ್ಮ, ಮುತ್ತಣ್ಣ ಇತರರು ಹಾಜರಿದ್ದರು,

ವರದಿ: ಸದಾನಂದ ಕನ್ನೇಗಾಲ

error: