ಗುಂಡ್ಲುಪೇಟೆ. ಪಟ್ಟಣದ ದೇವರಾಜ ಅರಸು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 73ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು. ತಾಲೂಕಿನ ಪ್ರಭಾರ ತಹಸೀಲ್ದಾರರಾದ ರಾಜ ಕಾಂತ ಮತ್ತು ಪುರಸಭೆಯ ಅಧ್ಯಕ್ಷರಾದ ಪಿ ಗಿರೀಶ್ರವರು ಧ್ವಜಾರೋಹಣವನ್ನು ನೆರವೇರಿಸಿದರು. ಮತ್ತು ಕಾರ್ಯಕ್ರಮವನ್ನು ದೀಪ ಬೆಳಗುವುದರ ಮುಖಾಂತರ ಚಾಲನೆ ನೀಡಿದರು. ಮುಖ್ಯ ಭಾಷಣಕಾರರಾಗಿ ನಂದೀಶ್, ರವರು ಮಾತನಾಡಿ ಭಾರತ ದೇಶ ಇಡೀ ಜಗತ್ತಿನ ಅತಿದೊಡ್ಡ ದೇಶವಾಗಿದ್ದು. ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ.ಹಾಗಾಗಿ ನಮಗೆ ಶ್ರೇಷ್ಠ ಸಂವಿಧಾನವನ್ನು ನೀಡಿದ ಮಹಾನ್ ವ್ಯಕ್ತಿಯನ್ನು ಇಂದು ಗಣರಾಜ್ಯೋತ್ಸವದಂದು ಸ್ಮರಿಸೋಣ ಎಂದರು. ನಂತರ ಎಪಿಎಂಸಿ ಅಧ್ಯಕ್ಷರಾದ ಶಿವನಾಗಪ್ಪ ಮಾತನಾಡಿ ಭಾರತ ದೇಶ ಅತಿ ದೊಡ್ಡ ದೇಶವಾಗಿದ್ದು. ನಮಗೆ ಶ್ರೇಷ್ಠ ಸಂವಿಧಾನವನ್ನ ನೀಡಿದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾದ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರನ್ನು ಇಂದು ಸ್ಮರಿಸೋಣ ಮತ್ತು ಸಂವಿಧಾನ ಶಿಲ್ಪಿ ಸಾರಿರುವ ಸಮಾನತೆಯನ್ನು ಉಳಿಸಿಕೊಂಡು ಹೋಗೋಣ ಜಾತ್ಯತೀತವಾಗಿ ಅಸ್ಪೃಶ್ಯತೆಯನ್ನು ಹೋಗಲಾಡಿಸೋಣ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರಾದ ಪಿ. ಗಿರೀಶ್, ಉಪಾಧ್ಯಕ್ಷರಾದ ದೀಪಿಕಾ ಅಶ್ವಿನ್, ಸದಸ್ಯರುಗಳು ಎಪಿಎಂಸಿ ಅಧ್ಯಕ್ಷರಾದ ಶಿವನಾಗಪ್ಪ, ಶಿವಬಸಪ್ಪ ಕೊಡಸೋಗೆ, ಕನ್ನಡಪರ ಹಿರಿಯ ವರದಿಗಾರರಾದ ಬ್ರಹ್ಮಾನಂದ, ಕನ್ನಡಪರ ಸಂಘಟನೆಗಳ ಆದ ಕಾವಲುಪಡೆ ಸಂಘಟನೆಯವರು, ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ ಸಂಘಟನೆಯವರು, ಮಾನವ ಬಂಧುತ್ವ ವೇದಿಕೆ, ಕರುನಾಡ ಯುವಶಕ್ತಿ ಸಂಘಟನೆ, ಇನ್ನೂ ಅನೇಕ ಕನ್ನಡಪರ ಸಂಘಟನೆಯವರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು
ವರದಿ: ಸದಾಸಂದ ಕನ್ನೇಗಾಲ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.