ಗುಂಡ್ಲುಪೇಟೆ:- ಪಟ್ಟಣದ ಚಾಮರಾಜನಗರ ರಸ್ತೆಯಲ್ಲಿರುವ ವೀರಯೋಧ ಶಿವಾನಂದ ಸ್ಮಾರಕದ ಮುಂದೆ ಕಾವಲು ಪಡೆ ಸಂಘಟನೆ ವತಿಯಿಂದ 73ನೇ ಗಣರಾಜ್ಯೋತ್ಸವಕಾರ್ಯಕ್ರಮವನ್ನು ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಅಬ್ದುಲ್ ಮಾಲಿ ಕ್ ರವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಪಿ. ಶ್ರೀನಿವಾಸಮೂರ್ತಿ ಮಾತನಾಡಿ ಕಾವಲುಪಡೆಯ ಕಾರ್ಯಕ್ರಮಗಳನ್ನು ಮುಕ್ತಕಂಠದಿAದ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಹಿರಿಯ ಹೋರಾಟಗಾರರಾದ ಬ್ರಹ್ಮಾನಂದ, ಕಾವಲುಪಡೆಯ ಗೌರವಾಧ್ಯಕ್ಷರಾದ ವೆಂಕಟೇಶ್ ಗೌಡ್ರು,ಕಾರ್ಯದರ್ಶಿಗಳಾದ ಮುಬಾರಕ್, ಕಾರ್ಯಾಧ್ಯಕ್ಷರಾದ ಇಲಿಯಾಸ್, ಉಪಾಧ್ಯಕ್ಷರಾದ ಸಾಧಿಕ್ ಪಾಶ, ಕಸಬಾ ಹೋಬಳಿಯ ಘಟಕದ ಅಧ್ಯಕ್ಷರಾದ ರಾಜು, ಮಿಮಿಕ್ರಿ ರಾಜು ,ಮಿಟಾಯಿ ಮಂಜು, ಸಾರ್ವಜನಿಕರು ಕಾರ್ಮಿಕರು ಉಪಸ್ಥರಿದ್ದರು
ವರದಿ: ಸದಾನಂದ ಕನ್ನೇಗಾಲ ಗುಂಡ್ಲುಪೇಟೆ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.