December 22, 2024

Bhavana Tv

Its Your Channel

ಕೇಂದ್ರ ಸರ್ಕಾರದ 2022- 23ನೇ ಬಜೆಟ್ ಅತ್ಯಂತ ನಿರಾಶದಾಯಕ ಬಜೆಟ್- ಎಚ್ .ಎo.ಗಣೇಶ್ ಪ್ರಸಾದ್

ಗುಂಡ್ಲುಪೇಟೆ:- ಸರ್ಕಾರ ಮಂಡಿಸಿದ ಬಜೆಟ್ ಅತ್ಯಂತ ನಿರಾಶದಾಯಕ ಬಜೆಟ್ ಇದಾಗಿದ್ದು. ಏನು ಇಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, ರಕ್ಷಣೆ,ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಪೂರಕವಾದ ಯಾವುದೇ ಅಂಶಗಳ ಉಲ್ಲೇಖವಿಲ್ಲ. ಮತ್ತು ಎಲ್ಲಾ ರಂಗದಲ್ಲೂ ರಾಜ್ಯಕ್ಕೆ ಶೂನ್ಯ ಕೊಡುಗೆ ನೀಡಿದೆ. ಕೇಂದ್ರ ಸರ್ಕಾರ ಕರ್ನಾಟಕದ ಹೆಸರನ್ನು ಪ್ರಸ್ತಾಪ ಮಾಡದ ಬಜೆಟ್ ಮಂಡಿಸಿದ್ದು ರೈಲ್ವೆ ಯೋಜನೆಗಳ ಘೋಷಣೆಯಲ್ಲಿ ಮಲತಾಯಿ ಧೋರಣೆಯನ್ನು ಅನುಸರಿಸಿದೆ. ಕೋವಿಡ್ ಸಮಯದಲ್ಲಿ ಸರ್ಕಾರ ಘೋಷಿಸಿದ ಪರಿಹಾರವು ಜನರಿಗೆ ತಲುಪಲಿಲ್ಲ ಕೋವಿಡ್ ನಿಂದ ಸತ್ತವರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ಪರಿಹಾರ ನೀಡುವ ನಿರೀಕ್ಷೆ ಹುಸಿಯಾಗಿದೆ ರಾಜ್ಯದಿಂದ ಬಿಜೆಪಿಯ 25 ಸಂಸದರು ಇದ್ದು ಕೇಂದ್ರ ಸಚಿವರು ನಮ್ಮ ರಾಜ್ಯದಿಂದ ಆಯ್ಕೆಯಾಗಿದ್ದರು. ನಮ್ಮ ರಾಜ್ಯದ ಆಶೋತ್ತರಗಳಿಗೆ ಪೂರಕ ಯೋಜನೆಗಳಿಗೆ ಘೋಷಣೆ ಹಾಗೂ ಅನುದಾನ ನೀಡುವುದರಲ್ಲೂ ಉತ್ತರದ ರಾಜ್ಯಗಳಿಗೆ ಇರುವ ಪ್ರಾಶಸ್ತ್ಯ ನೀಡಿರುವುದು ಬೇಸರದ ಸಂಗತಿಯಾಗಿದೆ ಎಂದರು

ವರದಿ: ಸದಾನಂದ ಕನ್ನೇಗಾಲ

error: