December 20, 2024

Bhavana Tv

Its Your Channel

ಒಂದು ವರ್ಷ ಎಂಟು ತಿಂಗಳು ಕಳೆದರೂ ಪೂರ್ಣಗೊಳ್ಳದ ಮಳವಳ್ಳಿ ನೇನೇಕಟ್ಟೆ ರಸ್ತೆ

ಗುಂಡ್ಲುಪೇಟೆ ತಾಲೂಕಿನ ಮಳವಳ್ಳಿಯಿಂದ ನೇನೇಕಟ್ಟೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಗುದ್ದಲಿ ಪೂಜೆಯಾಗಿ ಒಂದು ವರ್ಷ ಎಂಟು ತಿಂಗಳು ಕಳೆದರೂ ಇನ್ನೂ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದ್ದು ರಸ್ತೆಗೆ ಜಲ್ಲಿ ಹಾಗೂ ಕೆಂಪು ಮಣ್ಣನ್ನು ಹಾಕಿರುವುದರಿಂದ ವಾಹನಗಳು ಚಲಿಸುವಾಗ ಗ್ರಾಮದ ಅಕ್ಕಪಕ್ಕ ಮನೆಗಳಿಗೆ ವಿಪರೀತ ಧೂಳಿನಿಂದ ಸಮಸ್ಯೆಯಾಗುತಿದ್ದು ಇದನ್ನು ಖಂಡಿಸಿದ ಮಳವಳ್ಳಿ ಗ್ರಾಮಸ್ಥರು ರಸ್ತೆಯಲ್ಲಿ ನಿಂತು ಗುತ್ತಿಗೆದಾರನ ವಿರುದ್ಧ ಮತ್ತು ಇಂಜಿನಿಯರ್ ವಿರುದ್ಧ ಪ್ರತಿಭಟನೆ ನಡೆಸಿದರು. ಈ ರಸ್ತೆಯನ್ನು ತ್ವರಿತವಾಗಿ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಸಂಬAಧಪಟ್ಟ ಅಧಿಕಾರಿಗಳ ಕಚೇರಿಯ ಮುಂದೆ ಉಗ್ರವಾದ ಪ್ರತಿಭಟನೆಯನ್ನು ಮಾಡುವುದಾಗಿ ರೈತರು ಮತ್ತು ಗ್ರಾಮಸ್ಥರು ಎಚ್ಚರಿಕೆಯನ್ನು ಮೂಲಕ ನೀಡಿದ್ದಾರೆ.

ವರದಿ: ಸದಾನಂದ ಕನ್ನೇಗಾಲ

error: