December 20, 2024

Bhavana Tv

Its Your Channel

ಮಧ್ವ ನವಮಿ ಪ್ರಯುಕ್ತ ಗುರುರಾಘವೇಂದ್ರ ರಾಯರ ಮಠದಲ್ಲಿ ವಿಶೇಷ ಪೂಜೆ

ಗುಂಡ್ಲುಪೇಟೆ : ಪಟ್ಟಣದ ಮಹಾಲಕ್ಷ್ಮಿ ಬಡಾವಣೆ ಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನದಲ್ಲಿ ಮಧ್ವ ನವಮಿ ಪ್ರಯುಕ್ತ ಶ್ರೀ ಮುಖ್ಯ ಪ್ರಾಣ ದೇವರು ಹಾಗೂ ರಾಯರ ಬೃಂದಾವನ ಕ್ಕೆ ವಿಶೇಷ ಪೂಜೆ ಮತ್ತು ಅಭಿಷೇಕ ಹಮ್ಮಿಕೊಳ್ಳಲಾಗಿತ್ತು ..

ಇಂದು ಗುರುವಾರ ಮಧ್ವ ನವಮಿ ಹಿನ್ನೆಲೆ ರಾಯರ ಮೃತ್ತಿಕಾ ಬೃಂದಾವನಕ್ಕೆ ಬೆಳಿಗ್ಗೆ 7.30 ಪಂಚಾಮೃತ ಅಭಿಷೇಕ , 8.30 ಪವನ ಹೋಮ , 10 ಗಂಟೆಗೆ ಮಧ್ವಾಚಾರ್ಯರಿಗೆ ಪಲ್ಲಕ್ಕಿ ಸೇವೆ , ಉಯ್ಯಾಲೆ ಸೇವೆ , ಸೇರಿದಂತೆ ನಾನಾ ಬಗೆಯ ಹೂವಿನ ಮೂಲಕ ವಿಶೇಷವಾಗಿ ರಾಯರ ಬೃಂದಾವನವನ್ನು ಅಲಂಕಾರ ಮಾಡುವ ಮೂಲಕ 12 ಗಂಟೆಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು ,
ತದನಂತರ ಮಠಕ್ಕೆ ಬಂದ ಭಕ್ತಾದಿಗಳಿಗೆ ಶ್ರೀ ಮಠದ ಆಡಳಿತ ಮಂಡಳಿ ಅಧ್ಯಕ್ಷರಾದ ರಾಜೇಶ್ವರಿ ಚಂದ್ರಶೇಖರ್ ಮುಖಂಡತ್ವದಲ್ಲಿ ಅನ್ನ ಪ್ರಸಾದ ವಿತರಣೆ ಮಾಡಲಾಯಿತು ,

ಇದೇ ಸಂದರ್ಭದಲ್ಲಿ ಮಠದ ಪಕ್ಕದ ಶ್ರೀರಾಮ ದೇವರ ಗುಡ್ಡದ ಕೆಳಭಾಗದಲ್ಲಿ ನಿರ್ಮಾಣ ಮಾಡುತ್ತಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕಿಟಕಿ,ಚೌಕಟ್ಟನ್ನು ಅಳವಡಿಸುವ ಕಾರ್ಯ ಮಾಡಲಾಯಿತು ,
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಯುವ ನೇತಾರ ಹೆಚ್.ಎಂ.ಗಣೇಶ್ ಪ್ರಸಾದ್ , ಪುರಸಭಾ ಅಧ್ಯಕ್ಷ ರಾದ ಪಿ.ಗಿರೀಶ್ , ಉಪಾಧ್ಯಕ್ಷ ದೀಪಿಕಾ ಅಶ್ವಿನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಮುಖ್ಯ ಪ್ರಾಣ ದೇವರ ಹಾಗೂ ರಾಯರ ಬೃಂದಾವನ ದರ್ಶನ ಪಡೆದರು ,
ಕಾರ್ಯಕ್ರಮದ ಕೊನೆಯಲ್ಲಿ ಮೈಸೂರಿನ ಶ್ರೀನಿವಾಸ ಹಾಗೂ ವಿಶಾಲಕ್ಷ್ಮಿರವರಿಂದ ದೇವರ ನಾಮಗಳ ಭಕ್ತಗಾಯನ ಹಮ್ಮಿಕೊಳ್ಳಲಾಗಿತ್ತು .. ಕಾರ್ಯಕ್ರಮ ದಲ್ಲಿ ಶ್ರೀ ಮಠದ ಆಡಳಿತ ಮಂಡಳಿಯ ಸದಸ್ಯರು, ಕೆಎಸ್ ಮಹೇಶ್, ಜಿಕೆ ಲೋಕೇಶ್, ಸಹಾಯಕ ಚಂದ್ರು, ಹಾಜರಿದ್ದರು

ವರದಿ: ಸದಾನಂದ ಕನ್ನೇಗಾಲ

error: