December 22, 2024

Bhavana Tv

Its Your Channel

ಗುಂಡ್ಲುಪೇಟೆಯಲ್ಲಿ ಶ್ರೀ ಕನಕ ಪತ್ತಿನ ಸಹಕಾರ ಸಂಘ ಅಸ್ತಿತ್ವಕ್ಕೆ

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಶ್ರೀ ಕನಕ ಪತ್ತಿನ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ಕುರುಬ ಸಮಾಜದ ತಾಲೂಕು ಅಧ್ಯಕ್ಷರಾದ ಎಲ್.ಸುರೇಶ್ ರವರು ಮಾತನಾಡಿ ನಮ್ಮ ಸಮಾಜ ತೀರ ಹಿಂದುಳಿದ ಸಮಾಜವಾಗಿದೆ ನಮ್ಮ ಸಮಾಜದ ಅಭಿವೃದ್ಧಿಗಾಗಿ ಶ್ರೀ ಕನಕ ಪತ್ತಿನ ಸಹಕಾರ ಸಂಘವನ್ನು ಆರಂಭಿಸಿದ್ದು ಇದರ ಉದ್ದೇಶ ನಮ್ಮ ಸಮಾಜ ಹಿಂದುಳಿದ ಸಮಾಜವಾಗಿದ್ದು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದೆ ತರಲು ಈ ಒಂದು ಕನಕ ಸಹಕಾರ ಸಂಘವನ್ನು ಆರಂಭಿಸಲಾಗಿದೆ ಎಂದರು.
ನಂತರ ತಾಲೂಕು ಗೌರವಾಧ್ಯಕ್ಷರಾದ ಬಸವರಾಜು ಮಾತನಾಡಿ ನಮ್ಮ ಸಮಾಜದವರು ತಾಲೂಕಿನಲ್ಲಿ 25 ಸಾವಿರ ಜನಸಂಖ್ಯೆ ಉಳ್ಳವರಾಗಿದ್ದು ಯಾವುದೇ ಕ್ಷೇತ್ರದಲ್ಲೂಮುಂದುವರೆದಿಲ್ಲ ಹಾಗಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಸದೃಢರಾಗಬೇಕು ಎಂದು ಈ ಸಂಘವನ್ನು ಪ್ರಾರಂಭ ಮಾಡಿದ್ದೇವೆ ಎಂದ ರು.
ಈ ಸಂದರ್ಭದಲ್ಲಿ ತಾಲೂಕು ಕುರುಬ ಸಮಾಜದ ಅಧ್ಯಕ್ಷರಾದ ಎಲ್.ಸುರೇಶ್, ತಾಲೂಕು ಗೌರವಾಧ್ಯಕ್ಷರಾದ ಬಸವರಾಜು, ಚಿಕ್ಕಾಟಿ ಬೀರೇಗೌಡ, ಮಲ್ಲಯ್ಯನಪುರ ನಾಗರಾಜು ,ಹೊಸೂರು ಶಿವಣ್ಣ, ಮುಖಹಳ್ಳಿ ಗ್ರಾಮಪಂಚಾಯತಿ ಅಧ್ಯಕ್ಷ ಪ್ರವೀಣ್, ಹೊಸೂರು ನಾಗರಾಜು ವಿಶ್ವನಾಥ್ ಜಿಕೆ, ಶಿವರಾಜ್ ಚಿಕ್ಕಾಟಿ ,ಇನ್ನು ಮುಂತಾದ ಮುಖಂಡರು ಯುವಕರು ಹಾಜರಿದ್ದರು

ವರದಿ: ಸದಾನಂದ ಕನ್ನೆಗಾಲ ಗುಂಡ್ಲುಪೇಟೆ

error: