May 4, 2024

Bhavana Tv

Its Your Channel

ಗುಮ್ಮ ಕಲ್ಲು ಗುಡ್ಡ ಕುಸಿತ ಪ್ರಕರಣ ಉನ್ನತ ಮಟ್ಟದ ತನಿಖೆ ನಡೆಸಲು ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ

ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮಕ್ಕೆ ಹೊಂದಿಕೊoಡಿರುವ ಗುಮ್ಮ ಕಲ್ಲು ಗುಡ್ಡ ಕುಸಿತಗೊಂಡ ಪ್ರಕರಣ ಉನ್ನತ ಮಟ್ಟದ ತನಿಖೆ ನಡೆಸಿ ಸಂಬoಧಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಬೇಕೆಂದು ಗುಂಡ್ಲುಪೇಟೆ ತಾಲೂಕಿನ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ
ತಾಲೂಕಿನ ಮಡಹಳ್ಳಿ ಗ್ರಾಮದ ಎಲ್ಲೆಗೆ ಸೇರಿದ ಸರ್ವೆ ನಂಬರ್ ೧೯೨ ಸರ್ಕಾರಕ್ಕೆ ಸೇರಿದ ಜಾಗ ಮತ್ತು ಗೋಮಾಳಕ್ಕೆ ಸೇರಿದ ಗುಮ್ಮ ಕಲ್ಲುಗುಡ್ಡೆ ಎಂಬ ಗುಡ್ಡದಲ್ಲಿ ಬಿಳಿ ಕಲ್ಲು ಕ್ವಾರೆ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದ್ದು ದಿನಾಂಕ ೪-೩-೨೦೨೨ರಂದು ಗಣಿಗಾರಿಕೆ ನಡೆಯುವ ಸಂದರ್ಭದಲ್ಲಿ ಗುಡ್ಡವು ಕುಸಿದುಬಿದ್ದು ಇದರ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ೨೫ ಮಂದಿ ಕೂಲಿ ಕಾರ್ಮಿಕರು ಸಿಲುಕಿಕೊಂಡು ಬಲಿಯಾಗಿದ್ದಾರೆ. ಸಿಲುಕಿರುವ ಕೂಲಿ ಕಾರ್ಮಿಕರು ಹೊರರಾಜ್ಯದ ವರಾಗಿದ್ದು ಅವರ ಪರಿಚಯಗಳು ಮಾಲೀಕರಿಗೆ ಮಾತ್ರ ತಿಳಿದಿದೆ ಎಂದು ಬಲ್ಲ ಮೂಲಗಳು ಹೇಳುತ್ತವೆ ಏನೇ ಆಗಲಿ ಉಳ್ಳವರಿಗೆ ಹಣವನ್ನು ಮಾಡಿಕೊಳ್ಳಲು ಹೋಗಿ ಎಷ್ಟು ಬೇರೆ ರಾಜ್ಯ ದಿಂದ ಹೊಟ್ಟೆಪಾಡಿಗಾಗಿ ಬಂದಿರುವ ಅಮಾಯಕ ಜೀವಗಳು ಬಲಿಯಾಗಿವೆ. ಇದನ್ನು ತೀವ್ರವಾಗಿ ಖಂಡಿಸಿ ದಲಿತ ಸಂಘರ್ಷ ಸಮಿತಿಯು ಚಾಮರಾಜನಗರ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಗೌರವ ಅಧ್ಯಕ್ಷ ತೊಂಡವಾಡಿ ಶಿವಯ್ಯ, ಸಂಚಾಲಕರಾದ ರಂಗಸ್ವಾಮಿ, ನಂಜುAಡಸ್ವಾಮಿ, ಮುತ್ತಣ್ಣ ಹೂಲಸ ಗುಂದಿ ಹಾಜರಿದ್ದರು

ವರದಿ :- ಸದಾನಂದ ಕನ್ನೆಗಾಲ ಗುಂಡ್ಲುಪೇಟೆ

error: