ಗುಂಡ್ಲುಪೇಟೆ: ತಾಲ್ಲೂಕಿನ ಪುತ್ತನಪುರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಿoದ ಮೂರು ಮಹಿಳಾ ಸಂಘದ 40 ಮಂದಿ ಮಹಿಳಾ ಸದಸ್ಯರಿಗೆ ಒಟ್ಟು 15 ಲಕ್ಷ ಸಾಲ ವಿತರಣೆಯನ್ನು ಸಂಘದ ಅಧ್ಯಕ್ಷರಾದ ಪಿ,ಬಿ ರಾಜಶೇಖರ್ ರವರು ವಿತರಿಸಿದರು.
ಅಧ್ಯಕ್ಷರಾದ ಪಿ ಬಿ ರಾಜಶೇಖರಪ್ಪ ಮಾತನಾಡಿ ಸಂಘದಿAದ ತಲಾ ಒಂದು ಸಂಘಕ್ಕೆ 6 ಲಕ್ಷ ದಂತೆ, ಎರಡು ಸಂಘಕ್ಕೆ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷ ಎಂ ಪಿ ಸುನೀಲ್ ಸಹಕಾರದಿಂದ ಆರು ಲಕ್ಷ ನೀಡುತಿದ್ದು ಒಂದು ಸಂಘಕ್ಕೆ ನಮ್ಮ ಸಂಘದಿAದ ಐದು ಲಕ್ಷ ಸಾಲ ನೀಡಲಾಗುತ್ತಿದೆ, ಸಂಘದಿAದ ಮೂರರಿಂದ ಐದು ಲಕ್ಷ ನೀಡಬಹುದು ಹೆಚ್ಚಿನ ಅವಶ್ಯಕತೆ ಇದ್ದರೆ ಹತ್ತು ಲಕ್ಷದ ವರೆಗೂ ಸಾಲ ನೀಡುವ ಅವಕಾಶ ಇದೆ ಎಂದರು.
ಸಾಲ ಪಡೆದವರು ಮರುಪಾವತಿ ಮಾಡಿದರೆ ಇನ್ನೂ ಹೆಚ್ಚಿನ ಸಂಘಗಳಿಗೆ ಸಾಲ ನೀಡಬಹುದು, ಮುಂದಿನ ದಿನದಲ್ಲಿ ಟ್ರಾಕ್ಟರ್ ಸಾಲ ನೀಡಲಾಗುವುದು ಎಂದರು.
ಇದುವರೆಗೆ ಸಂಘಗಳಿಗೆ 50 ಲಕ್ಷ ಸಾಲ ನೀಡಲಾಗಿದ್ದು ಇದಕ್ಕೆ ಕಾರಣ ಹಿಂದೆ ಇದ್ದ ಕಾರ್ಯಕಾರಣಿ ಸದಸ್ಯರ ಸಹಕಾರವು ಇದೆ . ಒಟ್ಟು ಒಂದು ಕೋಟಿವರೆಗೆ ಸಾಲ ನೀಡಲಾಗಿದೆ ಸಂಘದ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪಿ,ಬಿ ರಾಜಶೇಖರ್, ಉಪಾಧ್ಯಕ್ಷ ದೊಡ್ಡಪ್ಪ, ನಿರ್ದೇಶಕರುಗಳಾದ ಶಿವಣ್ಣ, ಕುಮಾರಸ್ವಾಮಿ, ಮಂಜಪ್ಪ, ಪವಿತ್ರಕುಮಾರ್, ಕೆಂಪರಾಜು, ಮಂಜುನಾಥ್, ಇಂದಿರಾ, ಮಂಗಳಮ್ಮ, ಮುಖಂಡರುಗಳಾದ ನಾಗೇಶ್,ಸುರೇಶ್ ಗ್ರಾ.ಪಂ ಸದಸ್ಯ, ಮಹದೇವಪ್ಪ, ಸುರೇಶ್, ಸೀನಪ್ಪ, ಪಿ,ಎಸ್ ಮಹದೇವಪ್ಪ ಮುಖ್ಯ ಕಾರ್ಯನಿರ್ವಾಹಕ ಸಂಜು , ಸಹಾಯಕ ಶಿವನಂಜೇಗೌಡ, ಮತ್ತಿತರರಿದ್ದರು. ಈ ಸಮಯದಲ್ಲಿ ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮ ಸಂಘದ ವತಿಯಿಂದ ಹಮ್ಮಿಕೊಂಡಿದ್ದರು
ವರದಿ: ಸದಾನಂದ ಕನ್ನೇಗಾಲ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.