ಗುಂಡ್ಲುಪೇಟೆ:- ಇಂದು ಅಖಿಲ ಭಾರತ ಕರುನಾಡ ಯುವ ಶಕ್ತಿ ಸಂಘಟನೆ (ರಿ) ಗುಂಡ್ಲುಪೇಟೆ ತಾಲ್ಲೂಕು ಘಟಕದ ವತಿಯಿಂದ ಗುಂಡ್ಲುಪೇಟೆ ತಾಲ್ಲೂಕಿನ ಕುಣಗಳ್ಳಿ ಗ್ರಾಮದ ಅಂಗವಿಕಲರಾದ ರಾಜು ಅವರ ಮನೆಗೆ ಮಾಹಿತಿ ಆಧಾರದ ಮೇಲೆ ಅಖಿಲ ಭಾರತ ಕರುನಾಡ ಯುವ ಶಕ್ತಿ ಸಂಘಟನೆಯು ತಾಲ್ಲೂಕು ಅಧ್ಯಕ್ಷರಾದ ಮುನೀರ್ ಪಾಷಾ ಅವರ ನೇತೃತ್ವದಲ್ಲಿ ಆಹಾರ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತ ಕರುನಾಡ ಯುವ ಶಕ್ತಿ ಸಂಘಟನೆಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ಯೋಗೇಶ ಕೆ ಮಾತನಾಡುತ್ತಾ ಕುಣಗಳ್ಳಿ ಗ್ರಾಮದ ರಾಜು ರವರು ಸಣ್ಣ ಪ್ರಾಯದಲ್ಲೇ ಒಂದು ಕೈ ಕಳೆದುಕೊಳ್ಳುವುದರ ಜೊತೆಗೆ ಕುಟುಂಬದ ಅಣ್ಣ, ಅಕ್ಕ,ತಾಯಿ ಮೂವರನ್ನು ಕಳೆದುಕೊಂಡು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲುತ್ತಿದ್ದು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಅಲ್ಲದೇ ಮನೆಯೂ ಬೀಳುವ ಸ್ಥಿತಿಯಲ್ಲಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದ್ದು.ಈ ಸಂದರ್ಭದಲ್ಲಿ ತ್ರಿಪದಿ ಕವಿ ಸರ್ವಜ್ಞನ ವಚನ ನೆನಪಾಗುತ್ತಿದೆ ಅದೇನೆಂದರೆ ಅನ್ನ ಇಕ್ಕುವುದು, ನನ್ನಿಯನ್ನು ನುಡಿಯುವುದು ತನ್ನಂತೆ ಪರರ ಬಗೆದೊಡೆ ಕೈಲಾಸ
ಬಿನ್ನಾಣವಕ್ಕು ಸರ್ವಜ್ಞ ಅಂದ್ರೆ ಹಸಿದಾಗ ಅನ್ನವನ್ನು ಇಕ್ಕುವುದು ಸ್ವರ್ಗದ ಮೊದಲ ಮೆಟ್ಟಿಲಾಗಿದೆ.ಬೇರೆಯವರ ನೋವನ್ನು ತಮ್ಮ ನೋವೆಂದು ಭಾವಿಸಿ ಅವರ ಕಷ್ಟಕ್ಕೆ ಸ್ಪಂದಿಸುವುದು ಸ್ವರ್ಗದ ಬಾಗಿಲು ತೆರೆಯುವಂತೆ ಮಾಡುತ್ತದೆ.ಅಂತಹ ಹೃದಯ ವೈಶಾಲ್ಯತೆ ಇರುವ ಮುನೀರ್ ಪಾಷಾ ರವರ ಅಧ್ಯಕ್ಷತೆಯಲ್ಲಿ ಆಹಾರ ಕಿಟ್ ವಿತರಣೆ ಮಾಡಿರುವುದು ನಾವು ಮಾಡಿರುವ ಪಾಪ ಕರ್ಮಗಳನ್ನು ನೆನಪಿಗೆ ತಂದು ದೀನ ದಲಿತರ ಬಗ್ಗೆ ನಿರ್ಗತಿಕರ ಬಗ್ಗೆ ಚಿಂತಿಸುವAತೆ ಮಾಡಿದೆ ಎಂದು ತುಂಬಾ ಭಾರವಾದ ಮನಸ್ಸಿನಿಂದಲೇ ಮಾತು ಮುಗಿಸಿ ಸಂಘಟನೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಕರುನಾಡ ಯುವ ಶಕ್ತಿ ಸಂಘಟನೆ ರಿ ಗುಂಡ್ಲುಪೇಟೆ ತಾಲ್ಲೂಕು ಅಧ್ಯಕ್ಷರಾದ ಮುನೀರ್ ಪಾಷಾ, ಪ್ರಧಾನ ಕಾರ್ಯದರ್ಶಿಗಳಾದ ಯೋಗೇಶ ಕೆ, ತಾಲ್ಲೂಕು ಯುವ ಘಟಕದ ಅಧ್ಯಕ್ಷರಾದ ಮಂಜುನಾಥ ಜಿ, ಸಾಹಿತಿಗಳಾದ ಕಾಳಿಂಗ ಸ್ವಾಮಿ ಸಿದ್ದಾರ್ಥ,ಕುಣಗಳ್ಳಿ ರಾಜು, ಮಣಿಕಂಠ, ಪತ್ರಕರ್ತರಾದ ಡಿ.ಸಿ.ಶಿವಕುಮಾರ್, ಕಾಂತರಾಜು ಉಪಸ್ಥಿತರಿದ್ದರು.
ವರದಿ: ಸದಾನಂದ ಕನ್ನೇಗಾಲ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.