ಗುಂಡ್ಲುಪೇಟೆ:-ಕಳೆದ ಭಾನುವಾರ ದ0ದು ಅಖಿಲ ಭಾರತ ಕರುನಾಡ ಯುವಶಕ್ತಿ ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ಮುನಿರ್ ಪಾಷಾರವರ ನೇತೃತ್ವದಲ್ಲಿ ಬೊಮ್ಮಲಾಪುರ ಗ್ರಾಮದ ನಿವಾಸಿ ಕಡುಬಡತನದಲ್ಲಿ ವಾಸಿಸುತ್ತಿರುವ ಚಿಕ್ಕ ಮಣಿಯಮ್ಮ ರವರ ಕುಟುಂಬದಲ್ಲಿ ಮಗ ಅಂಗವಿಕಲನಾಗಿದ್ದು.ಮಗಳಿಗೂ ಮಾತು ಬರದೆ ಮತ್ತೊಬ್ಬ ಮಗನ ವಿದ್ಯಾಭ್ಯಾಸಕ್ಕೆ ಹಣವಿಲ್ಲದೆ ಪರದಾಡುತ್ತಿದ್ದ ಮಾಹಿತಿಯನ್ನು ಅದೇ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ದೇವರಾಜು ರವರು ಮುನೀರ್ ಪಾಷ ರವರ ಗಮನಕ್ಕೆ ತಂದಾಗ ಸ್ಪಂದಿಸಿದ ಮುನೀರ್ ಪಾಷಾ ಅವರು ಬಡತನದಿಂದ ನೊಂದು ಹೋಗಿದ್ದ ಚಿಕ್ಕ ಮಣಿಯಮ್ಮ ರವರ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಸಾಹಿತಿಗಳಾದ ಕಾಳಿಂಗ ಸ್ವಾಮಿ ಮಾತನಾಡಿ ನಮ್ಮ ತಾಲೂಕಿನಲ್ಲಿ ಇಂತಹ ಬಡ ಕುಟುಂಬಗಳು ಎಷ್ಟು ಇವೆ ಇಂತಹವರನ್ನು ಪತ್ತೆಹಚ್ಚಿ ಕರುನಾಡ ಯುವಶಕ್ತಿ ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ಮುನೀರ್ ಪಾಷಾ ಅವರು ಸಹಾಯ ಮಾಡಲು ಮುಂದಾಗಿದ್ದಾರೆ ಅದೇ ರೀತಿ ಎಲ್ಲಾ ಸಂಘ-ಸAಸ್ಥೆಯವರು. ಇಂತಹವರನ್ನು ಗುರುತಿಸಿ ಒಂದು ಒಳ್ಳೆಯ ಕೆಲಸವನ್ನು ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರುನಾಡ ಯುವಶಕ್ತಿ ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ಮುನೀರ್ ಪಾಷಾ, ಸಾಹಿತಿಗಳಾದ ಕಾಳಿಂಗ ಸ್ವಾಮಿ ಗ್ರಾಮ ಪಂಚಾಯತಿ ಸದಸ್ಯ ದೇವರಾಜು ಹಾಗೂ ಊರಿನ ಮುಖಂಡರು ಹಾಜರಿದ್ದರು.
ವರದಿ: ಸದಾನಂದ ಕನ್ನೆಗಾಲ ಗುಂಡ್ಲುಪೇಟೆ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.