December 22, 2024

Bhavana Tv

Its Your Channel

ಗುಂಡ್ಲುಪೇಟೆ ತಾಲೂಕಿನ ಕೃಷಿ ಇಲಾಖೆಯ ವತಿಯಿಂದ ರಿಯಾಯಿತಿ ದರದಲ್ಲಿ ವ್ಯವಸಾಯ ಉಪಕರಣ

ಗುಂಡ್ಲುಪೇಟೆ ತಾಲ್ಲೂಕಿನ ಕೃಷಿ ಇಲಾಖೆಯ ವತಿಯಿಂದ ಬರಗಿ ಗ್ರಾಮದ ಗ್ರಾಮೀಣ ಕೃಷಿ ಸೇವಾ ಕೇಂದ್ರ ದಲ್ಲಿ ರಿಯಾಯಿತಿ ದರದಲ್ಲಿ ವ್ಯವಸಾಯ ಉಪಕರಣಗಳನ್ನು ಕ್ಷೇತ್ರದ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಸೊಸೈಟಿ ಅಧ್ಯಕ್ಷ ಡಿ.ಅರ್.ಮಹಾದೇವಪ್ಪ ರವರಿಗೆ ಹಸ್ತಾಂತರಿಸಿದರು,

ತದನಂತರ ಮಾತನಾಡಿದ ಶಾಸಕರು ಕೃಷಿ ಇಲಾಖೆಯ ಮೂಲಕ 10 ಲಕ್ಷರೂ ವೆಚ್ಚದ ವ್ಯವಸಾಯಕ್ಕೆ ಬೇಕಾದ ಸಾಮಾಗ್ರಿಗಳನ್ನು ಎಂಟು ಲಕ್ಷ ರೂ ರಿಯಾಯಿತಿ ದರದಲ್ಲಿ ಸೊಸೈಟಿ ಕಡೆಯಿಂದ ಕೇವಲ ಎರಡು ಲಕ್ಷದ ಹದಿನಾರು ಸಾವಿರ ಪಡೆದು ಟ್ರಾಕ್ಟರ್ , ಕಲ್ಟಿವೇಟರ್, ರೇಟ್ರವೇಟರ್, ಡಿಸ್ಕ್, ಬೀಜ ಒಕ್ಕಣೆ ಯಂತ್ರ ವನ್ನು ವಿತರಣೆ ಮಾಡುತ್ತಿದ್ದು , ಇದರಿಂದ ಗ್ರಾಮದಲ್ಲಿ ಕಡಿಮೆ ದರದಲ್ಲಿ ರೈತರುಗಳಿಗೆ ಉಳುಮೆ ಮಾಡಲು ಹಾಗೂ ವ್ಯವಸಾಯ ಉತ್ಪನ್ನಗಳ (ಬೀಜ ಒಕಣೆಮಾಡಲು) ನೀಡುವುದರಿಂದ ಗ್ರಾಮದ ಜನರಿಗೆ ಅನುಕೂಲ ವಾಗಲಿದ್ದು ರೈತರು ಇದರ ಸದುಪಯೋಗ ಪಡಿಸಿ ಕೊಳ್ಳುವಂತೆ ಕರೆ ನೀಡಿದರು ,
ಈ ಸಂದರ್ಭದಲ್ಲಿ ಬರಗಿ ಗ್ರಾಮೀಣ ಕೃಷಿ ಸೇವಾ ಕೇಂದ್ರ ದ ಸಿ.ಇ.ಒ. ಮಂಜುನಾಥ್ , ನಿರ್ದೇಶಕ ರಾದ ಶಿವಣ್ಣ , ದೇವಪ್ಪ, ಬಸವರಾಜು, ಸೇರಿದಂತೆ ತಾಲ್ಲೂಕು ಕೃಷಿ ಅಧಿಕಾರಿ ಪ್ರವೀಣ್ , ಸತೀಶ್ , ಕಿರಣ್ , ಪರಮಶಿವಯ್ಯ , ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ಡಿ.ಪಿ.ಜಗದೀಶ್ , ಕೆ.ಸಿ.ಮಧು , ಶಿವಪುರ ಮಂಜು , ಸೇರಿದಂತೆ ಹಲವಾರು ಹಾಜರಿದ್ದರು,

ವರದಿ:ಸದಾನಂದ ಕನ್ನೆಗಾಲ ಗುಂಡ್ಲುಪೇಟೆ

error: