ಗುಂಡ್ಲುಪೇಟೆ :- ಕನ್ನಡ ಚಿತ್ರರಂಗ ಕಂಡ ನವತಾರೆ ಡಾಕ್ಟರ್ ರಾಜಕುಮಾರ್ ಅವರ ಜನ್ಮದಿನದ ನಿಮಿತ್ತ ಗುಂಡ್ಲುಪೇಟೆ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಗುರುಭವನದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಶಾಸಕ ಸಿಎಸ್ ನಿರಂಜನ್ ಕುಮಾರ್ ರವರು ಚಾಲನೆ ನೀಡಿದರು.
ನಂತರರಕ್ತದಾನ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಸಿಎಸ್ ನಿರಂಜನ್ ಕುಮಾರ್ ರವರು ಪತ್ರಕರ್ತರು ಈ ರೀತಿಯಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ರಕ್ತದಾನ ಮಹಾದಾನ ಎಂಬAತೆ ಇನ್ನೊಬ್ಬರ ಜೀವವನ್ನು ಉಳಿಸಲು ಇದು ಉಪಯೋಗಕಾರಿ ಯಾಗಲಿದೆ ಎಂದರು. ಈ ವೇಳೆ ಕಣ್ಣಿನ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು. ನೇತ್ರದಾನ ಮಾಡಿದ ಎ ಸಿ ಎಫ್ ರವೀಂದ್ರ ಅವರು ಇತರರಿಗೆ ಮಾದರಿಯಾದರು. ಕಣ್ಣಿನ ತಪಾಸಣೆ ಸದುಪಯೋಗವನ್ನು ಹಲವು ಮಂದಿ ಪಡೆದುಕೊಂಡರು ಈ ಸಂದರ್ಭದಲ್ಲಿ ಶಾಸಕ ಸಿಎಸ್ ನಿರಂಜನ್ ಕುಮಾರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ ಟಿ ಜಗತ್ ಪ್ರಕಾಶ್, ಹಿರಿಯ ಪತ್ರಕರ್ತರಾದ ಸುಬ್ಬರಾವ್, ವಿಜಯವಾಣಿ ವರದಿಗಾರರಾದ ಮಹದೇವಸ್ವಾಮಿ, ತಾಲೂಕು ಅಧ್ಯಕ್ಷರಾದ ರಾ. ಬಾಬು, ಮಹದೇವಪ್ರಸಾದ್ , ಮಹೇಂದ್ರ , ಸೋಮಶೇಖರ್, ಲೋಕೇಶ್ , ನಾಗೇಂದ್ರ, ಕಾವಲುಪಡೆಯ ಸಂಘಟನೆಯವರು ಹಾಜರಿದ್ದರು.
ವರದಿ: ಸದಾನಂದ ಕನ್ನೆಗಾಲ, ಗುಂಡ್ಲಪೇಟೆ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.