December 22, 2024

Bhavana Tv

Its Your Channel

ಗುಂಡ್ಲುಪೇಟೆ ಜಾತ್ರೆಯಲ್ಲಿ ಅವಘಡ: ರಥದ ಗಾಲಿಗೆ ಸಿಕ್ಕಿ ಇಬ್ಬರು ಸಾವು

ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಧಾರ್ಮಿಕ ದೇವಾಲಯವಾದ ಶ್ರೀ ಸ್ಕಂದಗಿರಿ ಶ್ರೀ ಪಾರ್ವತಾ೦ಭ ಸಮೇತ ಶ್ರೀ ಸೋಮೇಶ್ವರ ಸ್ವಾಮಿ ದೇವರ ಮಹಾರಥೋತ್ಸವ ಜರುಗಿತು. ತೇರು ಜರುಗುವ ಸಮಯದಲ್ಲಿ ತೇರಿಗೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ಗಾಯಳುಗಳು ಗುಂಡ್ಲುಪೇಟೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ೧೫ರಿಂದ ೨೦ ಸಾವಿರ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಸುತ್ತಮುತ್ತಲಿನ ಗ್ರಾಮಸ್ಥರು ಗಳು ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಯುವ ಮುಖಂಡರಾದ ಎಚ್ ಎಮ್ ಗಣೇಶ್ ಪ್ರಸಾದ್ ,ಕಬ್ಬಹಳ್ಳಿ ಮಹೇಶ್, ಬೆಟ್ಟಹಳ್ಳಿ ಕೆಂಪರಾಜು , ಎಪಿಎಂಸಿ ಸದಸ್ಯ ಬಸವರಾಜು , ಕಂದೇಗಾಲ ನಾಗಮಲ್ಲಪ್ಪ, ಗುರುಪ್ರಸಾ ದ್, ಇನ್ನು ಮುಂತಾದವರು ಹಾಗೂ ಸಾವಿರಾರು ಜನ ಭಕ್ತರು ಆಗಮಿಸಿದ್ದರು

ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಕುಳಿತು ರೈತ ಮುಖಂಡರುಗಳು ಧರಣಿ:-
ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಕುಳಿತು ರೈತ ಮುಖಂಡರುಗಳು ಧರಣಿಗೆ ಮುಂದಾಗಿ ಮೃತ ವ್ಯಕ್ತಿಗಳಿಗೆ ಸರ್ಕಾರದಿಂದ ೨೦ ಲಕ್ಷ ರೂ ಕೊಡಬೇಕೆಂದು ಆಗ್ರಹ ಮಾಡಿದರು.ಈ ಅವಘಡಕ್ಕೆ ನೇರ ಹೊಣೆ ತಾಲೂಕು ಆಡಳಿತ ಮತ್ತು ಜಿಲ್ಲಾ ಆಡಳಿತ ಎಂದು ರೈತ ಮುಖಂಡ ಕಡಬೂರು ಮಂಜುನಾಥ್ ಆರೋಪಿಸಿದ್ದಾರೆ, ಸ್ಥಳಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸ್ಥಳದಲ್ಲೇ ಉಸ್ತುವಾರಿ ಸಚಿವರಿಗೆ ಕರೆ ಮಾಡಿ ತಿಳಿಸಿದಾಗ ಸಚಿವರು ಇಬ್ಬರು ವ್ಯಕ್ತಿಗಳಿಗೆ ತಲಾ ೧೦ ಲಕ್ಷ ಪರಿಹಾರ ಕೊಡಲು ತೀರ್ಮಾನಿಸಲಾಗಿದೆ. ಎಂದರು ಪ್ರತಿಭಟನಾಕಾರರನ್ನು ಮನವೊಲಿಸಿ ಧರಣಿಯನ್ನು ಕೈಬಿಟ್ಟರು ಗಾಯಾಳುಗಳನ್ನು ನೋಡಲು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಯುವ ಮುಖಂಡರಾದ ಎಚ್ ಎಮ್ ಗಣೇಶ್ ಪ್ರಸಾದ್ ಮತ್ತು ಶಾಸಕ ಸಿಎಸ್ ನಿರಂಜನ್ ಕುಮಾರ್ ರವರು ದೌಡಾಯಿಸಿದರು

ವರದಿ: ಸದಾನಂದ ಕನ್ನೇಗಾಲ

error: