December 22, 2024

Bhavana Tv

Its Your Channel

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗುಂಡ್ಲುಪೇಟೆ ತಾಲೂಕಿನಲ್ಲಿ ಶೇ.93.93 ಫಲಿತಾಂಶ

ಗುಂಡ್ಲುಪೇಟೆ 2021- 22 ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.93.93 ಫಲಿತಾಂಶ ಬಂದಿದೆ . ಒಟ್ಟು ನೊಂದಾಯಿಸಿದ ವಿದ್ಯಾರ್ಥಿಗಳು 2398 ಅದರಲ್ಲಿ ಬಾಲಕರು 1211, ಬಾಲಕಿಯರು 1187, ಉತ್ತೀರ್ಣರಾಗಿದ್ದಾರೆ. ಬೇಗೂರಿನ ರಾಣಿ ಚೆನ್ನಮ್ಮ ವಸತಿ ಶಾಲೆಯ ಅನುಷಾ 621 ಮತ್ತು ಗುಂಡ್ಲುಪೇಟೆ ಸರ್ಕಾರಿ ಆದರ್ಶ ವಿದ್ಯಾಲಯದ ಸಿಂಚನ 601 ಇಬ್ಬರು ವಿದ್ಯಾರ್ಥಿಗಳು ಜಿಲ್ಲೆಗೆ ಅತಿ ಹೆಚ್ಚು ಅಂಕ ಗಳನ್ನ ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ರವರು ಅಭಿನಂದನೆಗಳು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಗುಂಡ್ಲುಪೇಟೆ ಆದರ್ಶ ವಿದ್ಯಾಲಯ ಸಿಂಚನ ರವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ಮತ್ತು ಸಂಪನ್ಮೂಲ ಸಮನ್ವಯಾಧಿಕಾರಿ ಗುರುಸ್ವಾಮಿ, ಶಿಕ್ಷಕರು ಗ್ರಾಮಸ್ಥರು ಹಾಜರಿದ್ದರು

ವರದಿ: ಸದಾನಂದ ಕನ್ನೇಗಾಲ

error: