April 17, 2025

Bhavana Tv

Its Your Channel

ಗುಂಡ್ಲುಪೇಟೆಯ ಮಾಜಿ ಪುರಸಭಾಧ್ಯಕ್ಷ ಪುಟ್ಟರಂಗ ನಾಯಕ ನಿಧನ

ಗುಂಡ್ಲುಪೇಟೆ :- ಮಾಜಿ ಪುರಸಭಾಧ್ಯಕ್ಷ ಮತ್ತು ಬಿಜೆಪಿ ಹಿರಿಯ ಮುಖಂಡ ಎಂ. ಪುಟ್ಟರಂಗ ನಾಯಕ 80 ಬುಧವಾರ ಸಂಜೆ ನಿಧನರಾದರು. ಮೃತರಿಗೆ ಪತ್ನಿ ಪುತ್ರಿ,ಹಾಲಿ ಪುರಸಭೆ ಅಧ್ಯಕ್ಷ ಪಿ. ಗಿರೀಶ್ ಸೇರಿದಂತೆ ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಅಂತ್ಯಕ್ರಿಯೆ ಗುರುವಾರ 12:30 ಪಟ್ಟಣದಲ್ಲಿರುವ ಅವರ ತೋಟದಲ್ಲಿ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಪುಟ್ಟರಂಗ ನಾಯಕರ ನಿಧನಕ್ಕೇ ಶಾಸಕ ಸಿಎಸ್ ನಿರಂಜನ್ ಕುಮಾರ್ ಮತ್ತು ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಮಲ್ಲೇಶ್ ನಾಯಕ್ ,ವೇಣು ನಾಯಕ್ ಸಂತಾಪ ಸೂಚಿಸಿದ್ದಾರೆ

ವರದಿ: ಸದಾನ0ದ ಕಣ್ಣೆಗಾಲ

error: