December 22, 2024

Bhavana Tv

Its Your Channel

ಕಾವಲುಪಡೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಗುಂಡ್ಲುಪೇಟೆ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಯಾದ ಸಂಧ್ಯಾ ಹಾಗೂ ಶ್ರೀನಿವಾಸ್ ನೇತೃತ್ವದಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ವೈದ್ಯಾಧಿಕಾರಿ ಸಂಧ್ಯಾ ರವರು ಮಾತನಾಡಿ ಪರಿಸರ ದಿನಾಚರಣೆಯ ಪ್ರಯುಕ್ತ ಗಿಡ ನೆಟ್ಟು ಬೆಳೆಸುವುದರಿಂದ ಉತ್ತಮವಾದ ಆಮ್ಲಜನಕ ನಮಗೆ ಸಿಗುತ್ತದೆ. ಹಾಗಾಗಿ ಇನ್ನು ಹೆಚ್ಚೆಚ್ಚುಗಿಡಗಳನ್ನು ಬೆಳೆಸಬೇಕು ಎಂದರು .

ನಂತರ ಮಾತನಾಡಿದ ತಾಲೂಕು ಕಾವಲು ಪಡೆಯ ಅಧ್ಯಕ್ಷರಾದ ಅಬ್ದುಲ್ ಮಾಲಿಕ್ ಮಾತನಾಡಿ ಪರಿಸರದ ಕಾಳಜಿ ಎಲ್ಲರೂ ವಹಿಸಬೇಕು ಮತ್ತು ಪರಿಸರ ಉಳಿಸಿ ಬೆಳೆಸಿ ಎಂದರು .

ಈ ಸಂದರ್ಭದಲ್ಲಿ ಕಾವಲುಪಡೆಯ ಕಾರ್ಯದರ್ಶಿಯಾದ ಮುಬಾರಕ್ ,ಜಿಲ್ಲಾ ಕಾರ್ಯಧ್ಯಕ್ಷರಾಗಿ ಅಬ್ದುಲ್ ರಶೀದ್ ,ಜಿಲ್ಲಾ ಉಪಾಧ್ಯಕ್ಷರಾದ ಅಮೀರ್, ಸಾಧಿಕ್ ಪಾಶ, ಇಲಿಯಾಸ್, ಗೌರವಾಧ್ಯಕ್ಷರಾದ ವೆಂಕಟೇಶ್ ಗೌಡ್ರು , ಎಚ್ ರಾಜು , ಮಿಮಿಕ್ರಿ ರಾಜು ,ಗುಂಜೂಟ್ಟಿ ,ರೈತ ಮುಖಂಡರಾದ ಶ್ರೀನಿವಾಸ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

ವರದಿ: ಸದಾನಂದ ಕನ್ನೇಗಾಲ

error: