ಗುಂಡ್ಲುಪೇಟೆ :- ವಿಧಾನಸಭಾ ಕ್ಷೇತ್ರದ ಚಾಮುಲ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್.ಎಸ್ ನಂಜುAಡ ಪ್ರಸಾದ್ ಮತ್ತು ಬಿಜೆಪಿಯ ಮೂಲ ಕಾರ್ಯಕರ್ತ ಎಂ.ಪಿ ಸುನೀಲ್ ರವರಿಗೆ ಪ್ರಜ್ಞಾವಂತ ಮತದಾರರು ತೀರ್ಪು ನೀಡಿ ಚಾಮುಲ್ ವಿಜಯ ಮಾಲೆಯನ್ನು ನೀಡಿದ್ದಾರೆ.
ಇದೇ ಹಿನ್ನೆಲೆಯಲ್ಲಿ ಶಾಸಕರು ಮತ್ತು ಶಾಸಕರ ಹಿಂಬಾಲಕರು ಏನೇ ಚುನಾವಣೆಯ ತಂತ್ರಗಾರಿಕೆಯನ್ನು ರೂಪಿಸಿದವರು ಮತದಾರರು ಎಚ್.ಎಸ್.ನಂಜುAಡ ಪ್ರಸಾದ್ ರವರಿಗೆ 62 ಮತಗಳನ್ನು ಮತ್ತು ಎಂಪಿ ಸುನಿಲ್ ರವರಿಗೆ 44 ಮತಗಳನ್ನು ನೀಡಿದ್ದಾರೆ. ಗುಂಡ್ಲುಪೇಟೆ ಕ್ಷೇತ್ರದ ಶಾಸಕರಾದ ಸಿ.ಎಸ್. ನಿರಂಜನ್ ಕುಮಾರ್ ರವರಿಗೆ ಭಾರಿ ಹಿನ್ನಡೆಯಾಗಿದೆ. ಮೈಸೂರು-ಚಾಮರಾಜನಗರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷರಾಗಿರುವ ಎಂ.ಪಿ.ಸುನೀಲ್ ಹಿಂಬಾಲಕರು ಗಳಾದ ಹೊಂಗಹಳ್ಳಿ ಮನು , ಕೊಡಸೋಗೆ ಕೆ ಸಿ ಮಧು, ಎಚ್ ಎಂ ಪ್ರಸಾದ್, ಗಂಗಾಧರಪ್ಪ ಕಗ್ಗಳದ ಹುಂಡಿ, ಕಡಬೂರು ಮಂಜುನಾಥ್ ರೈತಮುಖಂಡ, ವೀರಭದ್ರ ಹಕ್ಕಲಪುರ, ಇನ್ನು ಮುಂತಾದ ಮುಖಂಡರುಗಳು ಯುವಕರು ಗಳು ಎಂಪಿ ಸುನಿಲ್ ರವರಿಗೆ ಬೆನ್ನೆಲುಬಾಗಿ ನಿಂತು ಈ ಚುನಾವಣೆಯಲ್ಲಿ ರಣತಂತ್ರ ರೂಪಿಸಿ ಸತ್ಯಕ್ಕೆ ಯಾವತ್ತಿದ್ದರೂ ಜಯ ಎಂಬAತೆ ತಮ್ಮ ನಂಬಿಕೆಯನ್ನು ಇಟ್ಟುಕೊಂಡು ಕೆಲಸವನ್ನು ಮಾಡಿದ್ದಾರೆ ಇವರೆಲ್ಲರಿಗೂ ಕೂಡ ಎಂಪಿ ಸುನಿಲ್ ರವರು ಮಾಧ್ಯಮದ ಮೂಲಕ ಮತದಾರರಿಗೆ ಮತ್ತು ಸುನಿಲ್ ಅಭಿಮಾನಿಗಳ ಬಳಗದವರಿಗೆ ಮತ್ತು ಯುವಕರಿಗೆ ಧನ್ಯವಾದ ತಿಳಿಸಿದ್ದಾರೆ
ವರದಿ: ಸದಾನಂದ ಕನ್ನೇಗಾಲ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.