December 22, 2024

Bhavana Tv

Its Your Channel

ಜೂ. 23ರಂದು ತಾಲೂಕು ಕುಂಬಾರರ ಸಮಾಜದ ಸಮುದಾಯ ಭವನ ಉದ್ಘಾಟನೆಯ ಪೂರ್ವಭಾವಿ ಸಭೆ

ಗುಂಡ್ಲುಪೇಟೆ:- ಜೂ. 23ರಂದು ಪಟ್ಟಣದ ಸೋಮೇಶ್ವರ ಹಾಸ್ಟೆಲ್ ಎದುರು ತಾಲೂಕು ಕುಂಬಾರ ಸಮಾಜದ ಸಮುದಾಯ ಭವನ ಉದ್ಘಾಟನೆ ಆಗಲಿದ್ದು .ಅದರ ಪೂರ್ವಭಾವಿ ಸಭೆಯನ್ನು ಪತ್ರಿಕಾ ಪ್ರಕಟಣೆಯ ಮೂಲಕ ಇಂದು ವೆಂಕಟರಾಜು ತಾಲೂಕು ಅಧ್ಯಕ್ಷರ ಸಮ್ಮುಖದಲ್ಲಿ ಕರೆಯಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ದಿವಂಗತ ಎಚ್ ಎಸ್ ಮಹದೇವ ಪ್ರಸಾದ್ ಅವರ ಅವಧಿಯಲ್ಲಿ ನಮ್ಮ ಸಣ್ಣ ಸಮುದಾಯಕ್ಕೆ ಒಂದು ಸಮುದಾಯ ಭವನ ಬೇಕು ಎಂದು ಲಿಖಿತವಾಗಿ ಪತ್ರದ ಮೂಲಕ ನೀಡಿದ್ದರ ಫಲವಾಗಿ ಇಂದು ನಮಗೆ ಸಮುದಾಯ ಭವನ ನಿರ್ಮಾಣ ಆಗಿದೆ . ಶಾಸಕ ಸಿಎಸ್ ನಿರಂಜನ್ ಕುಮಾರ್ ಅವರಿಂದ ಉದ್ಘಾಟನೆ ನೆರವೇರಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು , ಸ್ಥಳೀಯ ಜನಪ್ರತಿನಿಧಿಗಳು,ಮತ್ತು ನಮ್ಮ ಸಮುದಾಯದ ಮುಖಂಡರು, ಯುವಕರು, ಹೆಚ್ಚಿನಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಈ ಪತ್ರಿಕಾಗೋಷ್ಠಿಯ ಮೂಲಕ ಕೇಳಿಕೊಳ್ಳುತ್ತೇವೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಟಿಎಸ್ ರಾಜೇಂದ್ರ, ತಾಲೂಕು ಅಧ್ಯಕ್ಷರಾದ ವೆಂಕಟ ರಾಜು ಪಿ. ಉಪಾಧ್ಯಕ್ಷರಾದ ಕೊಂಗಳ್ಳಿ ಶೆಟ್ಟಿ, ಹನುಮಂತ ಶೆಟ್ಟಿ,ಪ್ರಧಾನ ಕಾರ್ಯದರ್ಶಿಯಾದ ಹನುಮಂತ ಶೆಟ್ಟಿ,ಕೆ ಕುಂಬಾರರ ಸಮುದಾಯದ ಯುವಕರು ಹಾಜರಿದ್ದರು

ವರದಿ: ಸದಾನಂದ ಕನ್ನೇಗಾಲ

error: