December 22, 2024

Bhavana Tv

Its Your Channel

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಜುಲೈ 4 ರ0ದು ಜಿಲ್ಲಾಡಳಿತ ಭವನಕ್ಕೆ ಪಾದಯಾತ್ರೆಯ ಮೂಲಕ ಮುತ್ತಿಗೆ ಅನಿರ್ದಿಷ್ಟಾವಧಿ ಹಾಗೂ ಅಹೋರಾತ್ರಿ ಧರಣಿ ಸತ್ಯಾಗ್ರಹ

ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ರೈತ ಮುಖಂಡ ಕಡಬೂರು ಮಂಜುನಾಥ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸತತ 75 ವರ್ಷಗಳಿಂದ ರೈತರಿಗೆ ಅನ್ಯಾಯವೇಸುಗುತಿದ್ದು, ಜೊತೆಗೆ ಮಾರಣಾಂತಿಕ ಕಾಯ್ದೆಗಳನ್ನು ಜಾರಿಗೊಳಿಸುತ್ತಿದ್ದು, ರೈತರಿಗೆ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗಳನ್ನು ಅಧಿಕಾರಿಗಳ ಆಗಿರಬಹುದು ಅಥವಾ ಸರ್ಕಾರದ ಜನಪ್ರತಿನಿಧಿಗಳ ಆಗಿರಬಹುದು ತೊಂದರೆಗಳನ್ನು ಕೊಡುತ್ತ ಬಂದಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲೆಯ ನಾಲ್ಕು ದಿಕ್ಕಿನಿಂದ ಬೃಹತ್ ಪಾದಯಾತ್ರೆ ಮೂಲಕ ಮುತ್ತಿಗೆ ಮತ್ತು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಮಾಡುತ್ತೇವೆ ಎಂದರು .

ಜಿಲ್ಲಾ ರೈತಮುಖಂಡ ಗುರುಪ್ರಸಾದ್ ಮಾತನಾಡಿ ಅಧಿಕಾರಿಗಳು ಭ್ರಷ್ಟತನವನ್ನು ಬಿಡಬೇಕು ಯಾವೊಬ್ಬ ಅಧಿಕಾರಿಯೂ ಲಂಚವನ್ನು ತೆಗೆದುಕೊಳ್ಳದೆ ಕೆಲಸ ಮಾಡುತ್ತಿಲ್ಲ, ಕೇಳಿದರೆ ನಾವು ಶಾಸಕರಿಗೆ ಅಷ್ಟು ಕೊಟ್ಟು ಬಂದಿದ್ದೇವೆ ಇಷ್ಟು ಕೊಟ್ಟು ಬಂದಿದ್ದೇವೆ ಎನ್ನುತ್ತಿದ್ದಾರೆ ಇದನ್ನು ಖಂಡಿಸಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದರು

ಈ ಸಂದರ್ಭದಲ್ಲಿ ಹೊನ್ನುರುಪ್ರಕಾಶ, ಗುರುಪ್ರಸಾದ್, ಕಡಬೂರು ಮಂಜುನಾಥ್, ಕುಂದಕೆರೆ ಸಂಪತ್ತು ,ಮಾಡ್ರಹಳ್ಳಿ ಮಹಾದೇವಪ್ಪ, ದಡದಹಳ್ಳಿ ಮಹೇಶ್, ಸತೀಶ್ ಇನ್ನು ಮುಂತಾದ ರೈತ ಸಂಘದ ಮುಖಂಡರುಗಳು ಹಾಜರಿದ್ದರು..

ವರದಿ: ಸದಾನಂದ ಕನ್ನೇಗಾಲ

error: