December 21, 2024

Bhavana Tv

Its Your Channel

ಕೇಂದ್ರ ಬಿಜೆಪಿ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ

ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಶಾಂತಿಯುತ ಪ್ರತಿಭಟನೆಯನ್ನು ಕಾಂಗ್ರೆಸ್ ಯುವ ಮುಖಂಡರಾದ ಎಚ್ ಎ0 ಗಣೇಶ್ ಪ್ರಸಾದ್ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು. ನಂತರ ಮಾತನಾಡಿದ ಅವರು ಹಿಂದಿನ ಕಾಲದಲ್ಲಿ ಆರ್ಮಿಯಲ್ಲಿ ಇದ್ದಾರೆ ಎಂದರೆ ಅವರಿಗೆ ವಿಶೇಷವಾದ ಗೌರವವಿತ್ತು. ಈಗ ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆ ಹೊಸದಾಗಿ ಜಾರಿಗೆ ಮಾಡಿದ್ದಾರೆ ಈಗಿನ ಯುವಕರು ನಾಲ್ಕು ವರ್ಷಗಳ ಕಾಲ ಆರ್ಮಿಯಲ್ಲಿ ಸೇವೆ ಸಲ್ಲಿಸಿ ನನ್ನ ತಾಯಿನಾಡಿಗೆ ಹಿಂದಿರುಗಿದರೆ ಅವರಿಗೆ ಅಗೌರವವನ್ನು ಈ ಸಮಾಜ ತೋರುತ್ತದೆ ಹಾಗಾಗಿ ಯುವಕರಿಗೆ ಯೋಜನೆಯ ಅನುಕೂಲವಾಗುವುದಿಲ್ಲ ಆದಕಾರಣ ಈ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯ ನ್ನು ಹಿಂದಕ್ಕೆ ಪಡೆಯಬೇಕೆಂದು ಈ ಪ್ರತಿಭಟನೆಯ ಮೂಲಕ ತಿಳಿಸುತ್ತೇನೆ ಎಂದರು.

ತಾಲೂಕು ದಂಡಾಧಿಕಾರಿಗಳಾದ ಸಿ.ಜಿ. ರವಿಶಂಕರ್ ಅವರಿಗೆ ಅಗ್ನಿಪಥ್ ಯೋಜನೆಯನ್ನು ಕೈಬಿಡುವಂತೆ ಸರ್ಕಾರಕ್ಕೆ ಈ ಮೂಲಕ ಒತ್ತಾಯಿಸಿ ಮನವಿ ಪತ್ರವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರು ನೀಡಿದರು.

ಈ ಸಂದರ್ಭದಲ್ಲಿ ಎಚ್ ಎಮ್ ಗಣೇಶ್ ಪ್ರಸಾದ್, ಚಾಮುಲ್ ನಿರ್ದೇಶಕ ಎಚ್ ಎಸ್ ನಂಜುAಡ ಪ್ರಸಾದ್, ಎಚ್ ಎಸ್ ನಂಜಪ್ಪ, ಎಲ್ ಸುರೇಶ್, ಮುನಿರಾಜು, ಕಬ್ಬಹಳ್ಳಿ ಮಹೇಶ್, ಜಯಂತಿ, ಮೃತ್ಯುಂಜಯ, ಕೆಂಪರಾಜು,ಜಿಕೆ ಲೋಕೇಶ್ , ಗುರುಪ್ರಸಾದ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಇನ್ನು ಮುಂತಾದ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

ವರದಿ: ಸದಾನಂದ ಕನ್ನೇಗಾಲ

error: