December 22, 2024

Bhavana Tv

Its Your Channel

ಗುಂಡ್ಲುಪೇಟೆ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಕೊಡಸೋಗೆ ಕೆಎನ್ ಮಹದೇವಸ್ವಾಮಿ ಅವಿರೋಧ ಆಯ್ಕೆ

ಗುಂಡ್ಲುಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವಿಜಯವಾಣಿ ಪತ್ರಿಕೆಯ ಕೆ.ಎನ್ ಮಹದೇವಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ 10 ವರ್ಷಗಳಿಂದ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಯನಿರತ ಪತ್ರಕರ್ತರ ಸಂಘವು ರಕ್ತದಾನ ಶಿಬಿರ, ನೇತ್ರದಾನ ಶಿಬಿರ, ಹಾಗೂ ಅಗತ್ಯ ಉಳ್ಳವರಿಗೆ ಆರ್ಥಿಕ ಸಹಾಯ ದಂತಹ ಕೆಲಸಗಳನ್ನು ಮಾಡುತ್ತಾ ಬಂಡಿಪುರ ಅರಣ್ಯಕ್ಕೆ ಬೆಂಕಿ ಬಿದ್ದ ಸಮಯದಲ್ಲಿ ಸಾವಿಗೀಡಾದ ಅರಣ್ಯ ಇಲಾಖೆ ನೌಕರರೊಬ್ಬರ ಕುಟುಂಬಕ್ಕೆ ಸುಮಾರು ಒಂದು ಲಕ್ಷ ರೂಪಾಯಿ ಹಣವನ್ನು ಸಂಘದ ವತಿಯಿಂದ ನೀಡಿ ಹೃದಯ ವೈಶಾಲ್ಯತೆಯನ್ನು ಮೆರೆದಿದೆ. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾಗಿ ರಾ. ಬಾಬು ,ಉಪಾಧ್ಯಕ್ಷರಾಗಿ ವೀರಭದ್ರಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ದೇವರಹಳ್ಳಿ ಶಿವಕುಮಾರ್, ಖಜಾಂಚಿಯಾಗಿ ಬೈರೇಶ್, ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಹಸಗೂಲಿ ಮಹೇಂದ್ರ ಹಾಗೂ ಹ0ಗಳ ಮಹದೇವ ಪ್ರಸಾದ್ ಆಯ್ಕೆಯಾಗಿದ್ದಾರೆ. ಸಂಘದ ನೂತನ ನಿರ್ದೇಶಕರುಗಳಾದ ಚಿಕ್ಕ ತುಪ್ಪುರು ಮಲ್ಲು, ಕಂದೇಗಾಲ ಪ್ರಸಾದ್, ವೇಣುಗೋಪಾಲ್ ಬೇರಂಭಾಡಿ, ರಂಗಪುರ ಸುರೇಶ್ , ಯಡ ಹುಂಡಿ ಪ್ರಸಾದ್, ಹೆಗ್ಗಡ ಹಳ್ಳಿ ಸಿದ್ದಪ್ಪ, ದೀಪ ಶ್ರೀನಿವಾಸ್, ಕಾಂತರಾಜು, ಹಾಗೂ ಕನ್ನೇಗಾಲ ಸದಾನಂದ ಉಪಸ್ಥಿತರಿದ್ದರು.

ವರದಿ.:- ಸದಾನಂದ ಕನ್ನೇಗಾಲ ಗುಂಡ್ಲಪೇಟೆ

error: