April 11, 2025

Bhavana Tv

Its Your Channel

ಆಲು ಮೇಲಮ್ಮ ನಿಧನ

ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಪ್ರವಾಸಿ ಸ್ಥಳವಾದ ಶ್ರೀ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಗೋಪಾಲಕೃಷ್ಣ ಭಟ್ಟರು (ಗೋಪಿ ಬುದ್ದಿ) ಯವರ ತಾಯಿ ಆಲುಮೆಲಮ್ಮ 93 ನಿನ್ನೆ ಮುಂಜಾನೆ ಆರು ಗಂಟೆಯಲ್ಲಿ ಲಿಂಗೈಕ್ಯರಾಗಿದ್ದಾರೆ .
ಮೃತರಿಗೆ ನಾಲ್ಕು ಗಂಡು ಮಕ್ಕಳು ಒಬ್ಬರು ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮವಾದ ಕಣ್ಣೆಗಾಲದ ಅವರ ಜಮೀನಿನಲ್ಲಿ ಬ್ರಾಹ್ಮಣ ಸಮಾಜದ ವಿಧಿ ವಿಧಾನಗಳಿಂದ ಅಂತ್ಯಕ್ರಿಯೆ ನೆರವೇರಿತು.

ಮೃತರ ಕುಟುಂಬಕ್ಕೆ ಶಾಸಕ ಸಿ ಎಸ್ ನಿರಂಜನ್ ಕುಮಾರ್, ಯುವ ಮುಖಂಡ ಎಚ್ ಎಂ ಗಣೇಶ್ ಪ್ರಸಾದ್, ಎಚ್ ಎಸ್ ನಂಜಪ್ಪ, ಚಾಮುಲ್ ನಿರ್ದೇಶಕರು ಗಳಾದ ಎಂ.ಪಿ ಸುನಿಲ್, ಎಚ್ ಎಸ್ ನಂಜುAಡ ಪ್ರಸಾದ್, ಎಲ್ ಸುರೇಶ್, ಶಶಿಕಾಂತ್, ಹಾಗೂ ಕನ್ನೆಗಾಲದ ಗ್ರಾಮಸ್ಥರು ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಮತ್ತು ಬ್ರಾಹ್ಮಣ ಸಮಾಜದ ಬಂಧುಗಳು ಸಂತಾಪವನ್ನು ಸೂಚಿಸಿದ್ದಾರೆ.

ವರದಿ: ಸದಾನಂದ ಕನ್ನೇಗಾಲ

error: