December 21, 2024

Bhavana Tv

Its Your Channel

ಕರನಿರಾಕರಣೆ ಚಳುವಳಿಗೆ ಸಂದ ಜಯ

ಚಾಮರಾಜನಗರ. ಜಿಲ್ಲೆಯ ರೈತರ ಮನೆಯ ವಿದ್ಯುತ್ ಬಿಲ್ಲನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ವಸತಿ ಸಚಿವ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ವಿ ಸೋಮಣ್ಣನವರು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು 28 ಕೋಟಿ ಹಣವನ್ನ ಮನ್ನಾ ಮಾಡಲು ಘೋಷಣೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸಚಿವರಾದ ಸೋಮಣ್ಣನವರು ಮಾತನಾಡಿ ಆಗಿನ ಕಾಲದಲ್ಲಿ ಪ್ರೊಫೆಸರ್ ನಂಜುAಡಸ್ವಾಮಿಯವರು ಒಬ್ಬರಿದ್ದರು ಈಗ ಅವರ ಆದರ್ಶಗಳನ್ನ ಪಾಲಿಸಿ ಹಲವಾರು ರೈತ ಮುಖಂಡರುಗಳು ಇದ್ದೀರಾ ನಿಮಗೆ ನಮ್ಮ ಸಂಪೂರ್ಣ ಸಹಕಾರ ನೀಡುತ್ತೇವೆ . ನಾವು ಕೂಡ ಒಬ್ಬ ರೈತನ ಮಗನೇ ಎಂದು ರೈತ ಮುಖಂಡರು ಗಳಿಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರೈತ ಮುಖಂಡರುಗಳು ತುಂಬು ಹೃದಯದ ಧನ್ಯವಾದಗಳನ್ನ ಸಚಿವರಿಗೆ ಮಾಧ್ಯಮದ ಮೂಲಕ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಚಿವರಾದ ವಿ ಸೋಮಣ್ಣ, ಶಾಸಕರುಗಳಾದ ಸಿ ಎಸ್ ನಿರಂಜನ್ ಕುಮಾರ್, ಎನ್. ಮಹೇಶ್, ಜಿಲ್ಲಾ ಮಟ್ಟದರೈತ ಸಂಘದ ಮುಖಂಡರುಗಳಾದ ಹೊಮ್ನುರು ಪ್ರಕಾಶ್, ಗುರುಪ್ರಸಾದ್ ಕಡಬೂರು ಮಂಜುನಾಥ್, ಕುಂದುಕೆರೆ ಸಂಪತ್ತು, ಮಾಡ್ರಹಳ್ಳಿ ಮಹದೇವಪ್ಪ, ಹಾಗೂ ಇನ್ನು ಮುಂತಾದ ರೈತ ಮುಖಂಡರುಗಳು ಹಾಜರಿದ್ದರು.

ವರದಿ: ಸದಾನಂದ ಕನ್ನೇಗಾಲ

error: