December 21, 2024

Bhavana Tv

Its Your Channel

ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವಕ್ಕೆ ಹರಿದು ಬಂದ ಭಕ್ತಾದಿಗಳು

ಗುಂಡ್ಲುಪೇಟೆ ಪಟ್ಟಣದ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಶ್ರೀರಾಮದೇವರ ಗುಡ್ಡದ ಹತ್ತಿರ ಇರುವ ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವಕ್ಕೆ ತಾಲೂಕಿನಾದ್ಯಂತ ಭಕ್ತಾದಿಗಳು ಹರಿದು ಬಂದರು. ಶುಕ್ರವಾರ ಶನಿವಾರ ಮತ್ತು ಭಾನುವಾರ ಈ ಮೂರು ದಿನಗಳಂದು ವಿಜೃಂಭಣೆಯಿAದ ಮಹಾಮಂಗಳಾರತಿ, ಉಯ್ಯಾಲೆ ಸೇವೆ , ಸುಸ್ಥಿ ವಾಚನ, ಮತ್ತು ಮಧ್ಯರಾಧನೆ ಮತ್ತು ಪೂರ್ಣಾಹುತಿ ಅಲಂಕಾರ ನಡೆಯುತ್ತದೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಶುಕ್ರವಾರ ಕುಮಾರಿ ಯೋಗಶ್ರೀ ಮತ್ತು ಶ್ರೀ ಸಿದ್ದನಗೌಡ ಪಾಟೀಲ್ ರವರಿಂದ ಭಕ್ತಿಗಾನ , ಸುಧೆ. ದಾಸ ನಮನ, ಹಾಗೂ ಮಹಿಳವೃಂದ ಗುಂಡ್ಲುಪೇಟೆ ಇವರಿಂದ ಭಜನೆ ಹಾಗೂ ದೇವರನಾಮಗಳು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ, ಬಂದAತಹ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಏರ್ಪಡಿಸಿದರು.

ರವಿವಾರ ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ .ವಿಪ್ರ ಬಳಗದ ಮಹಿಳೆಯರಿಂದ ಹಾಗೂ ಮೈಸೂರಿನ ಹೆಸರಾಂತ ಶ್ರೀ ಮಾತಾ ಸತ್ಸಂಗದ ವತಿಯಿಂದ ಭಜನೆ ಹಾಗೂ ದೇವರನಾಮಗಳು ನಡೆದವು.

351ನೇ ಆರಾಧನಾ ಮಹೋತ್ಸವ ಕೊನೆಯ ದಿನವಾದ ಭಾನುವಾರದಂದು ಸಾಂಸ್ಕೃತಿಕ ಕಾರ್ಯಕ್ರಮ ವಿಪ್ರಬಳಗದ ಮಹಿಳೆಯರಿಂದ ಹಾಗೂ ಮೈಸೂರಿನ ಹೆಸರಾಂತ ಶ್ರೀ ಮಾತಾ ಸತ್ಸಂಗದ ವತಿಯಿಂದ ಭಜನೆ ಹಾಗೂ ದೇವರ ನಾಮಗಳು ಕಾರ್ಯಕ್ರಮ ನಡೆಯಿತು. ಶ್ರೀ ಮಾತಾ ಸತ್ಸಂಗದ ಮುಖ್ಯಸ್ಥರಾದ ಶ್ರೀಮತಿಯ ರುಕ್ಮಿಣಿ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಶ್ರೀಮತಿ ರಾಜೇಶ್ವರಿ ಚಂದ್ರಶೇಖರ್ ಅವರಿಂದ ಮತ್ತು ಆಡಳಿತ ಮಂಡಳಿಯ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ನಂತರ ಮಾತನಾಡಿದ ಬೆಂಗಳೂರಿನ ಹೆಸರಾಂತ ಅರ್ಚಕರಾದ ಶ್ರೀ ವೇಣುಗೋಪಾಲಾಚಾರ್ ರವರು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಬಗ್ಗೆ ಹಿತ ನುಡಿಗಳನ್ನು ತಿಳಿಸಿದರು
ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತಿಕ ಬೃಂದಾವನ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಚಂದ್ರಶೇಖರ್ ರವರಿಗೆ ಆಡಳಿತ ಮಂಡಳಿಯ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.
ಅಧ್ಯಕ್ಷರಾದ ರಾಜೇಶ್ವರಿ ಚಂದ್ರಶೇಖರ್ ಮಾತನಾಡಿ ಮೂರು ದಿನಗಳ ಕಾಲ ನಡೆದ ರಾಘವೇಂದ್ರ ರಾಯರ ಆರಾಧನೆ ಮಹೋತ್ಸವ ಕಾರ್ಯಕ್ರಮಕ್ಕೆ ಸಹಕರಿಸಿದ ತಾಲೂಕಿನ ಎಲ್ಲಾ ಭಕ್ತಾದಿಗಳಿಗೆ ಅನಂತನAತ ಧನ್ಯವಾದಗಳನ್ನ ಮಾಧ್ಯಮದ ಮೂಲಕ ತಿಳಿಸಿದರು.
ವರದಿ ; ಸದಾನಂದ ಗಂಡ್ಲುಪೇಟೆ

error: