April 11, 2025

Bhavana Tv

Its Your Channel

ಗುಂಡ್ಲುಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ, ದಿವಂಗತ ದೇವರಾಜು ಅರಸು ಮತ್ತು ದಿ.ರಾಜೀವ್ ಗಾಂದಿಜನ್ಮ ದಿನಾಚರಣೆ

ಗುಂಡ್ಲುಪೇಟೆ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ದಿವಂಗತ ದೇವರಾಜು ಅರಸು ಮತ್ತು ದಿ.ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು, ನಂತರ ಕಾಂಗ್ರೆಸ್ ಕಚೇರಿಯಿಂದ ಹೊರಟು ಎಂ.ಡಿ.ಸಿ.ಸಿ .ವೃತದ ಬಳಿ ಮಾನವ ಸರಪಳಿ ನಿರ್ಮಿಸಿ ಮಾಜಿ ಸಿ,ಎಂ ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಹೊಡೆದುದ್ದರ ಪರಿಣಾಮವಾಗಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರುಗಳು ರಸ್ತೆ ತಡೆ ನಡೆಸಿ ಧಿಕ್ಕಾರಗಳನ್ನ ಕೂಗಿದರು. ನಂತರ ತಾಲೂಕು ಕಚೇರಿಯ ಮುಂಭಾಗ ಧಿಕ್ಕಾರಗಳನ್ನ ಕೂಗುವುದರ ಮುಖಾಂತರ ತೀವ್ರವಾಗಿ ಖಂಡಿಸಿದ್ದಾರೆ.
ಕಾಂಗ್ರೆಸ್ ಯುವಮುಖಂಡ ಎಚ್ ಎಂ ಗಣೇಶ್ ಪ್ರಸಾದ್ ಮಾತನಾಡಿ ಮಾಜಿ ಸಿಎಂ ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆಯನ್ನು ಹೊಡೆದು ಈ ರೀತಿ ಕೃತ್ಯವನ್ನು ಮಾಡುವುದು ಬಿಜೆಪಿ ಮತ್ತು ಆರ್ ಎಸ್.ಎಸ್. ನವರ ಸಂಸ್ಕೃತಿಯಾಗಿದೆ. ಇನ್ನು ಮುಂದೆ ಈ ರೀತಿ ಕೃತ್ಯಗಳನ್ನು ನಡೆಸಲು ಹೊರಟರೆ ರಾಜ್ಯದ ಜನ ತಕ್ಕ ಪಾಠವನ್ನು ಮುಂದಿನ ಚುನಾವಣೆಗಳಲ್ಲಿ ಕಲಿಸುತ್ತಾರೆ ಎಂದರು.
ಎಚ್ ಎಸ್ ನಂಜಪ್ಪ , ಎ ಸಿದ್ದರಾಜು, ಚಾಮುಲ್ ನಿರ್ದೇಶಕ ನಂಜುAಡ ಪ್ರಸಾದ್,, ಬಿಜಿ ಶಿವಕುಮಾರ್, ಮುನಿರಾಜು, ಕಬ್ಬಳ್ಳಿ ಮಹೇಶ್, ಜಿಕೆ ಲೋಕೇಶ್ , ಎಚ್. ಪಿ ಮಹೇಂದ್ರ, ಪಿ.ಬಿ ರಾಜಶೇಖರ್, ಯುವ ಕಾಂಗ್ರೆಸ್ ಅಧ್ಯಕ್ಷ ಗುರುಪ್ರಸಾದ್ ,ನವೀನ್ ಮಂಜಪ್ಪ ಬಿಎಂ, ಇನ್ನು ಮುಂತಾದ ಕಾಂಗ್ರೆಸ್ ಪಕ್ಷದಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಸದಾನಂದ ಕನ್ನೇಗಾಲ

error: