ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವಿಶ್ವ ರೇಬಿಸ್ ಮಾಸಾಚರಣೆ ಜಾಗೃತಿ ಮೂಡಿಸಲು ಪಶು ವೈದ್ಯಾಧಿಕಾರಿಗಳಾದ ಡಾ. ಗುರುಮೂರ್ತಿ ರವರು ಮಾತನಾಡಿ ಶಾಲೆಯ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ವಿಶ್ವ ರೇಬಿಸ್ ದಿನಾಚರಣೆಯನ್ನು ನಾವು ಏಕೆ ಮಾಡುತ್ತೇವೆ ಮತ್ತು ಇದರಿಂದ ಆಗುವ ಅನುಕೂಲಗಳು ಹೇಗೆಎಂಬುದರ ಬಗ್ಗೆ ಸವಿಸ್ತಾರವಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂದಾದರು . ಮತ್ತು ವಿಶ್ವ ರೇಬಿಸ್ ಮಾಸಾಚರಣೆಯನ್ನು ಏಕೆ ಮಾಡಬೇಕು ಎಂದರೆ ವಿಜ್ಞಾನಿ ಲೂಯಿಸ್ ಸ್ಪಾಚರ್ಡ್ ಹುಚ್ಚುನಾಯಿ ಕಡಿತಕ್ಕೆ ಚುಚ್ಚುಮದ್ದನ್ನು ಕಂಡುಹಿಡಿದವರು ಅವರ ಜನ್ಮ ದಿನಾಚರಣೆ ಸೆಪ್ಟೆಂಬರ್ 25 ಹಾಗಾಗಿ ವಿಶ್ವ ರೇಬಿಸ್ ಮಾಸಾಚರಣೆ ದಿನದಂದು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ ಶಾಲೆಯ ಮಕ್ಕಳಿಗೆ ವಿಶೇಷವಾಗಿ ಜಾಗೃತಿ ಮೂಡಿಸುವುದರ ಜೊತೆಗೆ ಹುಚ್ಚುನಾಯಿ ಕಡಿತಕ್ಕೆ ಒಳಗಾದವರು ಭಯಪಡದೆ ನಿರ್ಭಯವಾಗಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲೇ ಚುಚ್ಚುಮದ್ದನ್ನು ಪಡೆಯಬಹುದು ಎಂದರು ಮತ್ತು ಸ್ವಾಭಾವಿಕವಾಗಿ ನಾವು ನೀವು ನಮ್ಮ ನಮ್ಮಮನೆಗಳಲ್ಲಿ ನಾಯಿ ಮತ್ತು ಬೆಕ್ಕನ್ನು ಸಾಕುತ್ತೇವೆ ಅದಕ್ಕೆ ಯಾವುದೇ ತರವಾದ ಕಾಯಿಲೆಗಳು ಬರದಂತೆ ವರ್ಷಕ್ಕೆ ಒಂದು ಬಾರಿ ಚುಚ್ಚುಮದ್ದನ್ನು ಹಾಕಿಸಿದರೆ ಯಾವುದೇ ತರಹದ ಕಾಯಿಲೆಗಳು ಬರದಂತೆ ಈ ಚುಚ್ಚುಮದ್ದು ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ಪಶು ಇಲಾಖೆಯ ಪರಿವೀಕ್ಷಕರಾದ ಪಾರ್ವತಮ್ಮ, ಸಿಬ್ಬಂದಿ ದುಂಡೇಗೌಡ, ಮುಖ್ಯ ಶಿಕ್ಷಕರಾದ ರಾಜೇಂದ್ರ, ಶಿಕ್ಷಕರಾದ ರಾಜಪ್ಪ ನಂದೀಶ್ ಮತ್ತು ಶಾಲೆಯ ಮಕ್ಕಳು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಸದಾನಂದ ಕನ್ನೇಗಾಲ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.