December 19, 2024

Bhavana Tv

Its Your Channel

ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿಯಲ್ಲಿ ಗ್ರಾಮೀಣ ದಸರಾ ಮಹೋತ್ಸವಕ್ಕೆ ಪೂರ್ವಭಾವಿ ಸಭೆ

ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿಯಲ್ಲಿ ಗ್ರಾಮೀಣ ದಸರಾ ಮಹೋತ್ಸವಕ್ಕೆ ಪೂರ್ವಭಾವಿ ಸಭೆ ಶಾಸಕರಾದ ಸಿ ಎಸ್ ನಿರಂಜನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ತಾಲೂಕಿನ ಎಲ್ಲಾ ಸಂಘ-ಸAಸ್ಥೆಯವರ ಮತ್ತು ಜನಪ್ರತಿನಿಧಿಗಳ ಅಭಿಪ್ರಾಯದಂತೆ ಒಪ್ಪಿಗೆ ತೆಗೆದುಕೊಂಡು ಗ್ರಾಮೀಣ ದಸರವನ್ನು ಯಾವ ರೀತಿ ಮಾಡಬೇಕು ಎಂದು ಚರ್ಚಿಸಲಾಯಿತು, ಪಟ್ಟಣ ಶುಚಿಯಾಗಿಡುವ ಬಗ್ಗೆ ಮತ್ತು ಬೀದಿ ದೀಪಗಳನ್ನು ಸರಿಪಡಿಸುವುದು, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಲೈಟಿಂಗ್ ಹಾಕುವುದು, ಸಾಂಸ್ಕೃತಿಕ ಕಲಾತಂಡದವರಿಗೆ ಆಹ್ವಾನ ನೀಡುವುದು, ಅಲ್ಲದೆ ವಿಶ್ವವಿಖ್ಯಾತ ಮೈಸೂರು ದಸರಾ ಪ್ರಖ್ಯಾತಿ ಹೊಂದಿರುವ ಆನೆ ಇದ್ದರೆ ಇನ್ನು ಮೆರಗು ಎಂದು ತಮ್ಮ ತಮ್ಮ ಅಭಿಪ್ರಾಯಗಳನ್ನು ಜನಪ್ರತಿನಿಧಿಗಳು ಸಂಘ-ಸAಸ್ಥೆಯವರು ಶಾಸಕರ ಮುಂದಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಎಲ್ಲಾ ಇಲಾಖಾ ವಾರು ಅಧಿಕಾರಿಗಳಿಗೆ ಏನೆಲ್ಲಾ ರೂಪರೇಶೆಳನ್ನ ಮಾಡಿಕೊಳ್ಳಬೇಕೆಂಬುದರ ಮಾರ್ಗವನ್ನು ಸೂಚಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ತಾಲೂಕು ಮಹಾಸಭಾ ಅಧ್ಯಕ್ಷರಾದ ಎಸ್ ಎಸ್ ನಂಜಪ್ಪ ,ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಎಂ ಶೈಲ ಕುಮಾರ್, ಮಾನವಬಂದುತ್ವವೇದಿಕೆ ಜಿಲ್ಲಾ ಸಂಚಾಲಕರಾದ ಸುಭಾಷ್ ಮಾಡ್ರಹಳ್ಳಿ, ತಾಲೂಕು ದಂಡಾಧಿಕಾರಿ ಸಿಜೆ ರವಿಶಂಕರ್, ಕಾಂತರಾಜ್ ಅರಸ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ , ಹಾಗೂ ಜನಪ್ರತಿನಿಧಿಗಳು ಸಂಘ ಸಂಸ್ಥೆ ಯವರು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಸದಾನ0ದ ಕನ್ನೆಗಾಲ ಗುಂಡ್ಲುಪೇಟೆ

error: