ಗುಂಡ್ಲುಪೇಟೆ. ರಾಷ್ಟ್ರೀಯ ವನ್ಯಜೀವಿ ಸಪ್ತಾಹ ಸಮಾರೋಪ ಸಮಾರಂಭ ಬಂಡಿಪುರ ಅಭಯಾರಣ್ಯದ ಮೇಲುಕಾಮ್ಮನಹಳ್ಳಿ ಸಫಾರಿ ಕೇಂದ್ರದ ಆವರಣದಲ್ಲಿ ಜರುಗಿತು
. ಕಾರ್ಯಕ್ರಮದಲ್ಲಿ ಗಣ್ಯರು ಜೊತೆಗೂಡಿ ದೀಪ ಬೆಳಗುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತವಿಕವಾಗಿ ಮಾತನಾಡಿದ ಬಂಡಿಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ. ರಮೇಶ್ ಕುಮಾರ್ ಮಾತನಾಡಿ ವನ್ಯಜೀವಿ ಸಪ್ತಾಹ ಕಾರ್ಯಕ್ರಮ ಒಂದು ತಿಂಗಳಿನಿAದ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದೇವೆ ಅದರಲ್ಲಿ ಶಾಲೆಯ ಮಕ್ಕಳಲ್ಲಿ ಪ್ರತಿಭೆಯನ್ನು ಹೊರ ತರಲು ಅವರಲ್ಲಿ ಇರುವ ಜ್ಞಾನವನ್ನು ಹೆಚ್ಚಿಸಲು , ಪ್ರಬಂಧ ಸ್ಪರ್ಧೆ, ಹಾಗೂ ಕ್ರೀಡೆಯಲ್ಲಿ ಪಾಲ್ಗೊಂಡವರಿಗೆ ವಿಶೇಷವಾಗಿ ಬಹುಮಾನ ವಿತರಣೆಯನ್ನು ಹಮ್ಮಿಕೊಂಡಿದ್ದೇವೆ. ಮತ್ತು ನಮ್ಮ ಅರಣ್ಯ ಇಲಾಖೆಯ ವನ್ಯಜೀವಿ ಸಪ್ತಾಹ ಪ್ರಾಣಿಗಳನ್ನು ನಿಯಂತ್ರಣ ಮಾಡುವ ಸಾಧಕರಿಗೆ ವಿಶೇಷವಾಗಿ ಮತ್ತು ಛಾಯಾಗ್ರಾಹಕರಿಗೆ ಬಹುಮಾನವನ್ನು ಹಮ್ಮಿಕೊಳ್ಳಲಾಗಿದೆ ಅಲ್ಲದೆ ರೈತರು ಮತ್ತು ಶಾಲಾ ಮಕ್ಕಳಲ್ಲಿ ಹಾಗೂ ಸಾರ್ವಜನಿಕರಿಗೆ ಕಾಡಿನ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆದು ಅಧ್ಯಯನ ಮಾಡುವ ನಿಟ್ಟಿನಲ್ಲಿ ಸಾಗಿ ಮುಂದಿನ ತಲೆಮಾರಿಗೆ ತಮ್ಮ ಪ್ರತಿಭೆಗಳ ಮೂಲಕ ಬೆಳಕನ್ನು ಚೆಲ್ಲಬೇಕು ಹಾಗಾಗಿ ಇದರ ಉದ್ದೇಶ ಮತ್ತು ಬಂಡೀಪುರ ಹುಲಿ ಸಂರಕ್ಷಣಾ ಅರಣ್ಯ ಸ್ಥಾಪನೆಗೊಂಡಿದ್ದು 1973 ರಲ್ಲಿ ಇಂದಿಗೆ 50 ವರ್ಷ ಗಳಾಗಿದೆ ಐವತ್ತು ವರ್ಷದ ಹಿಂದೆ ಈ ಕಾಡಿನಲ್ಲಿ 13 ಹುಲಿಗಳು ಇದ್ದವು ಈಗ ಇಲ್ಲಿ 173 ಹುಲಿಗಳು ಹಾಗೂ 200 ಚಿರತೆಗಳು ಮತ್ತು 3046 ಆನೆಗಳು ಇದೆ ಎಂಬುದು ನಮ್ಮೆಲ್ಲರ ಸಂತಸದ ವಿಷಯವಾಗಿದೆ ಎಂದರು ಹಾಗೂ ರೈತರು ಗ್ರಾಮಸ್ಥರು ಅಧಿಕಾರಿಗಳು ಮತ್ತು ಮಾಧ್ಯಮ ಮಿತ್ರರು ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ ಇದರಲ್ಲಿ ಎಂದರು
ಈ ಸಂದರ್ಭದಲ್ಲಿ ಮೈಸೂರು ಅರಣ್ಯ ಸಂರಕ್ಷಣಾಧಿಕಾರಿಯಾದ ಡಾ. ಮಾಲತಿಪ್ರಿಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಾಯಿತ್ರಿ ಕೆ ಎಂ, ಹ0ಗಳಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಜಪ್ಪ ,ಉಪಾಧ್ಯಕ್ಷರಾದ ಗೀತಾ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಮಲ್ಲೇಶ್‌ಪ್ಪ, ಚಾಮರಾಜನಗರ ಗೌರವ ವನ್ಯಜೀವಿ ಪರಿಪಾಲಕರಾದ ನಂಜುAಡ ರಾಜ್ ಅರಸ್ , ಇ ಒ ಕಾಂತರಾಜ್ ಅರಸ್ ಹಾಗೂ ಅರಣ್ಯ ಸಂರಕ್ಷಣಾಧಿಕಾರಿಗಳಾದ ರವೀಂದ್ರ, ನವೀನ್ ,ಪರಮೇಶ್, ಮತ್ತು ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯ ಸಹಾಯಕಾಧಿಕಾರಿಗಳು ಸಿಬ್ಬಂದಿ ವರ್ಗದವರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.
ವರದಿ: ಸದಾನ0ದ ಕನ್ನೆಗಾಲ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.