ಗುಂಡ್ಲುಪೇಟೆ ತಾಲೂಕಿನ ಪಸಯ್ಯನಪುರ ಗ್ರಾಮದ ರಾಜಮ್ಮ ಎಂಬ ಮಹಿಳೆಗೆ ಬಲಗಾಲು ಸ್ವಾಧೀನ ಕಳೆದುಕೊಂಡು ಜೀವನ ನಡೆಸಲು ಪರಿತಪಿಸುತ್ತಿದ್ದ ಮಹಿಳೆಗೆ ಕರುನಾಡುವ ಶಕ್ತಿ ಸಂಘಟನೆಯ ತಾಲೂಕು ಅಧ್ಯಕ್ಷ ಮುನೀರ್ ಪಾಷಾ ಅವರು ಒಂದು ತಿಂಗಳಿಗಾಗುವಷ್ಟು ಆಹಾರ ಧಾನ್ಯ ಕಿಟ್ ವಿತರಿಸುವ ಮೂಲಕ ಮಾನವೀಯತೆಯನ್ನು ತೋರಿದ್ದಾರೆ ಕೆಲವು ವರ್ಷಗಳಿಂದ ಪಾರ್ಶ್ವ ವಾಯುಗೆ ಒಳಗಾಗಿ ಬಲಗಾಲಿನ ಸ್ವಾಧೀನವನ್ನೇ ಕಳೆದುಕೊಂಡ ಅವರ ಸಹಾಯಕ್ಕೆ ನಿಂತಿದ್ದು ಮಾತ್ರ ಸಹೋದರ ನಾಗರಾಜು ಸಹೋದರನ ಸಹಾಯದಿಂದ ದೈನಂದಿನ ಜೀವನವನ್ನು ನೂಕುತ್ತಿರುವ ಇವರು ಇಂದೋ ನಾಳೆ ಕುಸಿದು ಬೀಳುವ ಸ್ಥಿತಿಯಲ್ಲಿರೋ ಜೋಪಡಿ ಯ0ತ ಮನೆಯಲ್ಲಿ ವಾಸವಾ ಗಿದ್ದಾರೆ .ಮಳೆ ಬಂತೆAದರೆ ಸೋರುವ ಮನೆ ,ಸಂಜೆ ಆದರೆ ಕತ್ತಲ ಬದುಕು ,ಸೋಲಾರ್ ದೀಪವೇ ಇವರಿಗೆ ಬೆಳಕು, ಮನೆಯಲ್ಲಿ ವಿದ್ಯುತ್ ಇಲ್ಲದ ಪರಿಸ್ಥಿತಿ ಈಎಲ್ಲಾ ಜ್ವಲಂತ ಸಮಸ್ಯೆಗಳು ಈ ಬಡ ಮಹಿಳೆಗೆ ಕಾಡುತ್ತಿದ್ದರು ಸಹ ಸಂಬAಧಪಟ್ಟ ಅಧಿಕಾರಿಗಳು ಗಮನ ಹರಿಸದೆ ಇರೋದು ವಿಪರ್ಯಾಸ. ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ ಜ್ವಲಂತ ಸಮಸ್ಯೆಗೆ ಸಿಲುಕಿ ಜೀವನ ನಡೆಸುತ್ತಿರುವ ರಾಜಮ್ಮ ಅವರ ಸಹಾಯಕ್ಕೆ ದಾವಿಸಿದ್ದು ಮಾತ್ರ ಕರುನಾಡುವ ಶಕ್ತಿ ಸಂಘಟನೆಯ ತಾಲೂಕು ಅಧ್ಯಕ್ಷ ಮುನಿರ್ ಪಾಷಾ ಮಾತ್ರ ಎಂದು ಅಲ್ಲಿನ ಸ್ಥಳೀಯ ರು ತಿಳಿಸಿದರು
ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಸಿದ್ದರಾಜು ಕರುನಾಡು ಯುವಶಕ್ತಿ ಸಂಘಟನೆಯ ಪದಾಧಿಕಾರಿಗಳಾದ ಈಶ್ವರ್, ಅನ್ಸರ್ ,ನಾಗರಾಜು ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.
ವರದಿ: ಸದಾನ0ದ ಕನ್ನೆಗಾಲ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.