
ಗುಂಡ್ಲುಪೇಟೆ ತಾಲೂಕಿನ ಹ೦ಗಳ ಗ್ರಾಮದ ಡಾ. ಬಿಆರ್ ಅಂಬೇಡ್ಕರ್ ಬೀದಿಯ ಪರಿಶಿಷ್ಟ ಜಾತಿಯ ದಲಿತ ಮಹಿಳೆಯರು ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಗ್ರಾಮ ಪಂಚಾಯತಿ ಸದಸ್ಯ ಗೌರಮ್ಮ ಮಾತನಾಡಿ ಕಳೆದ ೨೫ ವರ್ಷಗಳಿಂದ ನಿಮಗೆ ನಿವೇಶನ ನೀಡುತ್ತೇವೆ ಎಂದು ಜನಪ್ರತಿನಿಧಿಗಳು ಹೇಳಿಕೊಂಡು ಬಂದಿದ್ದಾರೆ. ಅದೇ ರೀತಿ ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ಯಾರೋಬ್ಬರಿಗೂ ಹಕ್ಕು ಪತ್ರವನ್ನು ನಮ್ಮ ಜನಾಂಗಕ್ಕೆ ನೀಡಿಲ್ಲ ಹಾಗಾಗಿ ನಮಗೆ ಹಕ್ಕು ಪತ್ರವನ್ನು ನೀಡಬೇಕು . ಸರ್ಕಾರ ಬಡವರ ಪರ ಇಲ್ಲದವರ ಪರ ಎಂದು ಹೇಳುತ್ತಿದೆ. ಆದರೆ ಎಲ್ಲವೂ ಉಳ್ಳವರ ಪಾಲಾಗಿದೆ. ಏನೇ ಆಗಲಿ ನಮಗೆ ನ್ಯಾಯ ದೊರಕಬೇಕು ಒಂದು ವೇಳೆ ನಮಗೆ ನಿವೇಶನ ಹಕ್ಕುಪತ್ರ ದೊರೆಯದೆ ಹೋದಲ್ಲಿ ನಾವು ಉಗ್ರವಾದ ಹೋರಾಟವನ್ನು ಮಾಡಲು ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ಈ ಮಾಧ್ಯಮದ ಮುಖಾಂತರ ತಿಳಿಸಿದರು.
ಈ ಸಂದರ್ಭದಲ್ಲಿ ಮಾನವ ಬಂದುತ್ವವೇದಿಕೆಯ ಜಿಲ್ಲಾ ಸಂಚಾಲಕರಾದ ಸುಭಾಷ್ ಮಾಡ್ರಹಳ್ಳಿ, ಸೋಮಣ್ಣ , ಮಹಿಳಾ ಹೋರಾಟಗಾರ್ತಿ ಜಯಂತಿ,ದಲಿತ ಮುಖಂಡರುಗಳು, ಮಾನವ ಹಕ್ಕು ಸಮಿತಿಯ ಜಿಲ್ಲಾಧ್ಯಕ್ಷರಾದ ನಾಗೇಂದ್ರ, ಪಾಪಣ್ಣ,ಹ೦ಗಳ ಗ್ರಾಮದ ಮಹಿಳೆಯರು, ಹಾಗೂ ಮುಖಂಡರುಗಳು, ಉಪಸ್ಥಿತರಿದ್ದರು.
ವರದಿ: ಸದಾನಂದ ಕನ್ನೇಗಾಲ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.