April 4, 2025

Bhavana Tv

Its Your Channel

ಪುರಾತನ ಕೋಟೆ ಮಾರಮ್ಮ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಕೆಲಸಕ್ಕೆ ಭೂಮಿ ಪೂಜೆ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ 5 ನೇ ವಾರ್ಡಿನಲ್ಲಿ ಇರುವ ಪುರಾತನ ಕೋಟೆ ಮಾರಮ್ಮ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಕೆಲಸಕ್ಕೆ ಪುರಸಭಾ ಅಧ್ಯಕ್ಷ ರಾದ ಪಿ.ಗಿರೀಶ್ ಹಾಗೂ ವಾರ್ಡನ ಸದಸ್ಯರು ಹಾಗೂ ಉಪಾಧ್ಯಕ್ಷರಾದ ದೀಪಿಕಾ ಅಶ್ವಿನ್ ರವರು ಭೂಮಿ ಪೂಜೆ ನೇರವೇರಿಸುವ ಮೂಲಕ ಚಾಲನೆ ನೀಡಿದರು,

ನಂತರ ಮಾತನಾಡಿದ ಅಧ್ಯಕ್ಷರು ನೂರಾರು ವರ್ಷಗಳ ಇತಿಹಾಸ ಇರುವ ಪುರಾತನ ದೇವಸ್ಥಾನವಾದ ಶ್ರೀ ಕೋಟೆ ಮಾರಮ್ಮ ತಾಯಿ ದೇವಸ್ಥಾನವನ್ನು ಪುರಸಭೆ ಅನುದಾನ 2.50 ಲಕ್ಷರೂ ವೆಚ್ಚದಲ್ಲಿ ಹಾಗೂ ದಾನಿಗಳ ಸಹಕಾರ ದಿಂದ ದೇವಸ್ಥಾನದ ಸುತ್ತಲೂ ಸುತ್ತುಗೋಡೆ ಸೇರಿದಂತೆ ಒತ್ತುವರಿ ಜಾಗವನ್ನು ತೆರವುಗೊಳಿಸಿ ನೆಲಹಾಸು ಹಾಗೂ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು . ಭಕ್ತಾದಿಗಳು ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ತಮ್ಮ ಕೈಲಾದ ಹಣ ಸಹಾಯ ಮಾಡುವ ಮೂಲಕ ಕಾಮಗಾರಿ ಪೂರ್ಣಗೊಳಿಸಲು ಸಹಕರಿಸ ಬೇಕೆಂದು ಮನವಿ ಮಾಡಿದರು ,
ಪುರಸಭಾ ಸದಸ್ಯರು ಹಾಗೂ ವಿಪ್ರ ಮಹಿಳಾ ಬಳಗ . ಶಾರದ ಸತ್ಸಂಗ ಸಮಾಜದ ಸದಸ್ಯರು ಹಾಜರಿದ್ದರು .

ವರದಿ:ಸದಾನಂದ ಕನ್ನೇಗಾಲ

error: