
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 25 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೇಸ್ ಪಕ್ಷದ ಮಾಜಿ ಶಾಸಕರು , ಸಚಿವರಾದ ಹೆಚ್.ಎಸ್. ಮಹದೇವ ಪ್ರಸಾದ್ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯ ಗಳನ್ನು ಮಾಡಿಲ್ಲ ಎಂದು ಆಡಳಿತ ಪಕ್ಷದ ಬಿಜೆಪಿ ಶಾಸಕರು ಕ್ಷೇತ್ರದ ಎಲ್ಲೆಡೆ ಅರೋಪ ಮಾಡುತ್ತಿದ್ದಾರೆ, ಹಾಗಾದರೇ ನಮ್ಮ ತಂದೆ ಯವರು ಕ್ಷೇತ್ರದಲ್ಲಿ ಎನು ಅಭಿವೃದ್ಧಿ ಕೆಲಸ ಮಾಡದಿದ್ದರೇ ಕ್ಷೇತ್ರದ ಜನತೆ ಯಾಕೆ..? ಸತತವಾಗಿ 25 ವರ್ಷ ಅಧಿಕಾರ ಕೊಡಲು ದಡ್ಡರೇ .? ಎಂದು ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಹೆಚ್.ಎಂ.ಗಣೇಶ್ ಪ್ರಸಾದ್ ಆಡಳಿತ ಪಕ್ಷದ ಶಾಸಕರಿಗೆ ಟಾಂಗ್ ಕೊಟ್ಟಿದ್ದಾರೆ.. !
ಅವರು ತಾಲೂಕಿನ ಗರಗನಹಳ್ಳಿ ಹುಂಡಿ ಗ್ರಾಮದಲ್ಲಿ ನಡೆದ ಬೂತ್ ಮಟ್ಟದ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರು ಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು ,
ನಮ್ಮ ತಂದೆಯವರ ಆಡಳಿತ ಅವಧಿಯಲ್ಲಿ ಮಂಜೂರಾದ ಶಾಶ್ವತ ಯೋಜನೆ ಗಳನ್ನು ಪೂರ್ಣಗೊಳಿಸವಲ್ಲೆ ಆಡಳಿತ ಪಕ್ಷದ ಶಾಸಕರ ಅಧಿಕಾರ ಅವಧಿ ಮುಗಿದಿದೆ .. ಇನ್ನೂ ಇವರು ಯಾವ ಶಾಶ್ವತ ಯೋಜನೆ ಅನುಷ್ಠಾನ ಗೊಳಿಸಿದ್ದಾರೆ ತಿಳಿಸಲಿ ಎಂದು ಸವಾಲ್ ಹಾಕಿದ್ದಾರೆ .
ಅರೋಪ ಮಾಡುವ ಮುನ್ನ ಕ್ಷೇತ್ರದಲ್ಲಿ ಈ ಹಿಂದೆ ನಡೆದಿರುವ ಅಭಿವೃದ್ಧಿ ಕಾಮಗಾರಿ ಹಾಗೂ ಅನುಷ್ಠಾನ ಗೊಂಡಿರುವ ಶಾಶ್ವತ ಯೋಜನೆ ಗಳ ವರದಿಗಳನ್ನು ಇಲಾಖೆಯ ಮೂಲಕ ವರದಿ ಪಡೆದು ಮಾತನಾಡಿದರೇ ಒಳಿತು ಎಂದು ಹೇಳಿದ್ದಾರೆ , ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ವರದಿ: ಸದಾನಂದ ಕನ್ನೆಗಾಲ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.