ಗುಂಡ್ಲುಪೇಟೆ ; ಬಂಡಿಪುರ ಹುಲಿ ಯೋಜನೆ ಉಪ ವಿಭಾಗ ಓಂಕಾರ ವನ್ಯಜೀವಿ ವಲಯ ವ್ಯಾಪ್ತಿಗೆ ಬರುವ ಬರಗಿ ಗ್ರಾಮದ ಸರ್ವೇ ನಂಬರ್ 203 ರ ಫೆಬ್ರವರಿ 13 ರಾತ್ರಿ ಹೆಣ್ಣು ಕಾಡಾನೆ ಯೊಂದು ಜಮೀನಿಗೆ ಆಹಾರ ಅರಸಿ ಬಂದAತಹ ವೇಳೆಯಲ್ಲಿ ಅಕ್ರಮವಾಗಿ ವಿದ್ಯುತ್ ಹರಿಸಿದ ತಂತಿಗೆ ಸಿಲುಕಿ ನೆರಳುತ್ತಿರುವ ವಿಚಾರ ತಿಳಿದು ಸ್ಥಳಕ್ಕೆ ತೆರಳಿ ಪರಿಶೀಲಿಸಿ ನೋಡಲಾಗಿ ಸದರಿ ಹೆಣ್ಣು ಆನೆಗೆ 25 .30 ವರ್ಷವಾಗಿದ್ದು ಇಲಾಖಾಪಶು ವೈದ್ಯಾಧಿಕಾರಿಗಳಾದ ಡಾ. ವಾಸೀ0 ಮಿರ್ಜಾ ರವರು ವಿದ್ಯುತ್ ಸ್ಪರ್ಶದಿಂದ ಗಾಯಗೊಂಡು ನೆರಳುತ್ತಿದ್ದ ಹೆಣ್ಣು ಆನೆಗೆ ಚಿಕಿತ್ಸೆ ನೀಡಿರುತ್ತಾರೆ. ಸದರಿ ಜಮೀನಿನ ಮಾಲಿಕರಾದ ನಾಗಪಟ್ಟಣ ಗ್ರಾಮದ ಪುತ್ತನಪೂರದ ರಾಜು ಬಿನ್ ಹನುಮಯ್ಯ ಇವರು ತಲೆಮರೆಸಿಕೊಂಡಿದ್ದಾರೆ .ತೆಂಗಿನ ಮರದಿಂದ ಮತ್ತೊಂದು ತೆಂಗಿನ ಮರಕ್ಕೆ ನೆಲದಿಂದ ಎರಡು ಅಡಿ ಎತ್ತರಕ್ಕೆ ತಂತಿ ಬೇಲಿ ಯನ್ನು ಹಾಕಿ ಅಕ್ರಮವಾಗಿ ವಿದ್ಯುತ್ ಕಲ್ಪಿಸಿರುವುದು ಸ್ಥಳ ಪರಿಶೀಲನೆ ವೇಳೆ ಕಂಡು ಬಂದಿದೆ,
ವರದಿ: ಸದಾನಂದ ಕನ್ನೆಗಾಲ ಗುಂಡ್ಲುಪೇಟೆ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.