December 22, 2024

Bhavana Tv

Its Your Channel

ಈಶ್ವರಪ್ಪ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ

ಗುಂಡ್ಲುಪೇಟೆ ಪಟ್ಟಣದ ನೆಹರು ಪಾರ್ಕನಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ, ಈಶ್ವರಪ್ಪ ನೇತೃತ್ವದಲ್ಲಿ ಗುಂಡ್ಲುಪೇಟೆಯಲ್ಲಿ ಯಶಸ್ವಿಯಾಗಿ ನಡೆಯಿತು

ದೀಪ ಬೆಳಗುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಹಲವಾರು ಜನಪರ ಯೋಜನೆಗಳನ್ನ ನೀಡುವುದರ ಜೊತೆಗೆ ಅಭಿವೃದ್ಧಿ ಕೆಲಸಗಳನ್ನ ಮಾಡಿಕೊಂಡು ಬಂದಿದ್ದೇವೆ. ಇದನ್ನು ಬಿಜೆಪಿಯ ಕಾರ್ಯಕರ್ತರು ಪ್ರತಿ ಮನೆ ಮನೆಗೆ ತಲುಪಿಸುವ ಕೆಲಸವನ್ನು ಮಾಡಿದರೆ ಮಾತ್ರ ಮುಂದಿನ ದಿನಗಳಲ್ಲಿ 150ಕ್ಕೂ ಹೆಚ್ಚು ಸೀಟುಗಳನ್ನು ನಾವು ಆರಿಸಿ ಗೆಲ್ಲಿಸಬಹುದು ಎನ್ನುವುದರ ಜೊತೆಗೆ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ವಿರೋಧ ಪಕ್ಷದವರು ಆಡಳಿತ ಇದ್ದ ಕಾಲದಲ್ಲಿ ಏನನ್ನು ಮಾಡದೆ ಆಡಳಿತ ಇಲ್ಲದೆ ಇರುವ ಕಾಲದಲ್ಲಿ ಘೋಷಣೆಗಳನ್ನ ಪ್ರಚಾರ ಮಾಡುತ್ತಿದ್ದಾರೆ ಇದು ಅವರ ಹುಚ್ಚತನ ಅಲ್ಲವೇ ಎಂದು ವ್ಯಂಗ್ಯವಾಡಿದರು.
ಶಾಸಕರಾದ ಸಿ ಎಸ್ ನಿರಂಜನ್ ಕುಮಾರ್ ಮಾತನಾಡಿ ನಾವು ಏನು ಮಾಡಿದ್ದೇವೆ ಎಂಬುದನ್ನು ಕಾರ್ಯಕರ್ತರು ಮತ್ತು ಆಯಾಯ ಗ್ರಾಮಸ್ಥರು ತಿಳಿಸಬೇಕೆ ಹೊರತು ವಿರೋಧ ಪಕ್ಷದ ಪ್ರಜಾದ್ವನಿ ಯಾತ್ರೆಯಲ್ಲಿ ಯಾರೋ ಒಬ್ಬ ನಾಯಕ ನಿರಂಜನ್ ನೀನ್ ಏನ್ ಮಾಡಿದ್ದೀಯಾ ಎಂಬುದು ಅವರಿಗೆ ತಿಳಿಯದೆ ಇರುವ ವಿಷಯ ಹಾಗಾಗಿ ನಾನು ಏನು ಮಾಡಿದ್ದೇನೆ ಎಂಬುದು ಕಾರ್ಯಕರ್ತರು ತೀರ್ಮಾನ ಮಾಡಲಿ ಎಂದು ಈ ಕಾರ್ಯಕ್ರಮದಲ್ಲಿ ತಿರುಗೇಟು ನೀಡಿದರು.
ಈ ಸಂದರ್ಭದಲ್ಲಿ ಸಚಿವರಾದ ಕೆ ಎಸ್ ಈಶ್ವರಪ್ಪ, ಸಂಸದರಾದ ಡಿ.ವಿ .ಸದಾನಂದ ಗೌಡ,, ಶಾಸಕರಾದ ಎನ್ ಮಹೇಶ್, ಕಾಡ ಅಧ್ಯಕ್ಷರಾದ ನಿಜಗುಣ ರಾಜು, ರಾಜ್ಯ ಉಪಾಧ್ಯಕ್ಷರಾದ ರಾಜೇಂದ್ರ, ಜಿಲ್ಲಾಧ್ಯಕ್ಷರಾದ ನಾರಾಯಣ, ಪ್ರಸಾದ್, ಉಪಾಧ್ಯಕ್ಷರಾದ ಹಿರಿ ಕಾಟಿ ಸೋಮಶೇಖರ್, ತಾಲೂಕು ಮಂಡಲ ಅಧ್ಯಕ್ಷರಾದ ಜಗದೀಶ್, ಎಲ್ ಸುರೇಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಣಯ್, ಶ್ರೀ ಮಹದೇವ್ ಪ್ರಸಾದ್ ಎಸ್ ಸಿ ಮಂಜುನಾಥ್ ,ಚೌಡಹಳ್ಳಿ ಗಣೇಶ್ ಹಾಗೂ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಯುವಕರು ಯುವ ವಿಜ್ಞಾನಿ ಡಾಕ್ಟರ್ ನವೀನ್ ಮೌರ್ಯ ರವರ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆಸೇರ್ಪಡೆಯಾದರು

ವರದಿ:ಸದಾನಂದ ಕನ್ನೆಗಾಲ

error: