October 5, 2024

Bhavana Tv

Its Your Channel

ಮಾರ್ಚ್ 16ಕ್ಕೆ ಗುಂಡ್ಲುಪೇಟೆಯಲ್ಲಿ ಬೃಹತ್ ಉದ್ಯೋಗ ಮೇಳ

ಗುಂಡ್ಲುಪೇಟೆ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಯುವ ಮುಖಂಡರಾದ ಎಚ್.ಎಂ. ಗಣೇಶ್ ಪ್ರಸಾದ್ ರವರು ಸುದ್ದಿಗೋಷ್ಠಿ ನಡೆಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ದಿವಂಗತ ಎಚ್ ಎಸ್ ಮಹದೇವ ಪ್ರಸಾದ್ ಟ್ರಸ್ಟ್ ಮತ್ತು ಅಕ್ಷರ ಫೌಂಡೇಶನ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಹಕಾರದೊಂದಿಗೆ ಬೃಹತ್ ಉದ್ಯೋಗ ಮೇಳವನ್ನ ಇದೇ ತಿಂಗಳು 16-03-2023ನೇ ಗುರುವಾರ ಸಮಯ ಬೆಳಿಗ್ಗೆ 9.30 ರಿಂದ ಸಂಜೆ 5 ತನಕ ಡಾ. ಬಿ .ಆರ್ .ಅಂಬೇಡ್ಕರ್ ಭವನ ಎದುರುಗಡೆ ಮೈದಾನದಲ್ಲಿ ಊಟಿ ಮೈಸೂರುರಸ್ತೆ ಗುಂಡ್ಲುಪೇಟೆ ಟೌನ್ ನಲ್ಲಿ ನಡೆಯಲಿದೆ. ಇದರ ಸದುಪಯೋಗವನ್ನು ನಿರುದ್ಯೋಗ ಯುವಕ ಯುವತಿಯರು ವಿಶೇಷವಾಗಿ ಅಂಗವಿಕಲ ಚೇತನರು ಪಡೆದುಕೊಳ್ಳಬೇಕೆಂದು ಮಾಧ್ಯಮದ ಮೂಲಕ ತಿಳಿಸುತ್ತೇವೆ ಎಂದರು.

ಅಲ್ಲದೆ 80ಕ್ಕೂ ಹೆಚ್ಚು ಕಂಪನಿ ಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ ಸುಮಾರು 10.ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳಿವೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರವನ್ನು ವಿತರಿಸಲಾಗುತ್ತದೆ ಎಂದರು.

ಕುಮಾರ್ ಮಾತನಾಡಿ ದುಡಿಯುವ ಕೈಗಳಿಗೆ ಕೆಲಸಗಳಿಲ್ಲದೆ ಕಾಲಹರಣವನ್ನ ಮಾಡುತ್ತಾ ಬಂದಿದೆ ಹಾಗಾಗಿ ಯುವ ಮುಖಂಡರಾದ ಎಚ್ ಎಮ್ ಗಣೇಶ್ ಪ್ರಸಾದ್ ಅವರು ಈ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದ್ದಾರೆ ಇದರ ಸದುಪಯೋಗವನ್ನು ವಿದ್ಯಾವಂತ ಯುವಕರುಗಳು ಮತ್ತು 8ನೇ ತರಗತಿ, ಎಸ್ ಎಸ್ ಎಲ್ ಸಿ, ಪಿಯುಸಿ , ಯಾವುದೇ ಡಿಗ್ರಿ ಪಡೆದವರು ಕೂಡ ತಮ್ಮ ವಿಳಾಸದ ಜೊತೆಗೆ ಮತ್ತು ತಮ್ಮ ಅಂಕಪಟ್ಟಿಯನ್ನು ಈ ಬೃಹತ್ ಉದ್ಯೋಗ ಮೇಳಕ್ಕೆ ತರತಕ್ಕದ್ದು ಎಂದರು.

ಈ ಸಂದರ್ಭದಲ್ಲಿ ಚಾಮುಲ್ ನಿರ್ದೇಶಕರಾದ ನಂಜುoಡ ಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುನಿರಾಜು, ಪಿ. ಬಿ .ರಾಜಶೇಖರ್, ಕಬ್ಬಳ್ಳಿ ಮಹೇಶ್ ,ಪುರಸಭೆ ಸದಸ್ಯರುಗಳು, ಯುವ ಕಾಂಗ್ರೆಸ್ ಅಧ್ಯಕ್ಷರಾದ ಗುರುಪ್ರಸಾದ್ ,ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಸದಾನಂದ ಕನ್ನೇಗಾಲ

error: