December 22, 2024

Bhavana Tv

Its Your Channel

ಹತ್ತಕ್ಕೂ ಹೆಚ್ಚು ಮಂದಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ಗೆ ಸೇರ್ಪಡೆ

ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದ ಯುವ ಮುಖಂಡರುಗಳು ಮತ್ತು ಹಿರಿಯರು ಬಿಜೆಪಿ ಪಕ್ಷವನ್ನು ತೊರೆದು ಎಚ್ ಎಂ ಗಣೇಶ್ ಪ್ರಸಾದ್ ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಗ್ರಾಮದ ನಾಗರಾಜು ,ಹಿರಿಯ ಮುಖಂಡ ನಾಗಯ್ಯ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಹಾದೇವ ಚಾರಿ ರಾಜಾಚಾರಿ ಮಹೇಶ್ ಪುಟ್ಟರಾಜು ಆಟೋ ಪಾಪಣ್ಣ ಸೇರಿದಂತೆ ಹತ್ತಕ್ಕೂ ಹೆಚ್ಚು ಮಂದಿ ಸೇರ್ಪಡೆಯಾದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡರಾದ ಬಿ. ಸಿದ್ದಮಲ್ಲಪ್ಪ, ಮಾಜಿ ಕಾಡ ಅಧ್ಯಕ್ಷರಾದ ಎಚ್ ಎಸ್ ನಂಜಪ್ಪ, ಚಾಮುಲ್ ನಿರ್ದೇಶಕರಾದ ಎಚ್ ಎಸ್ ನಂಜುAಡ ಪ್ರಸಾದ್, ದೇವರ ಹಳ್ಳಿ ಪ್ರಭು ಎಸ್, ಗ್ರಾಮ ಪಂಚಾಯತಿ ಸದಸ್ಯ ಜಿಕೆ ಲೋಕೇಶ್ ,ಕಳ್ಳಿಪುರ ರವಿ ,ರೈತ ಮುಖಂಡ ಶಿವ ಮಲ್ಲು, ಹಾಗೂ ಕನ್ನೆಗಾಲ ಗ್ರಾಮದ ಮುಖಂಡ ಜಯ, ರಾಜಪ್ಪ, ಗುರುಮಲ್ಲಪ್ಪ ವೀರಭದ್ರಪ್ಪ, ಮಹೇಶ್ ಸೇರಿದಂತೆ ಇನ್ನೂ ಹಲವು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಸದಾನಂದ ಕನ್ನೇಗಾಲ

error: