
ಗುಂಡ್ಲಪೇಟೆ : ಮಾರ್ಗದರ್ಶಿ ವಿಕಲಚೇತನರ ಸ್ವಯಂಸೇವ ಸಂಸ್ಥೆ ಚಾಮರಾಜನಗರ, ಮೋಟಿವೇಶನ್ ಇಂಡಿಯಾ ಸಂಸ್ಥೆಯ ವತಿಯಿಂದ ಗುಂಡ್ಲುಪೇಟೆ ತಾಲೂಕಿನ ವಿಕಲಚೇತನ ಮಕ್ಕಳಿಗೆ ಕಸ್ಟಮೈಸ್ ವೀಲ್ ಚೇರ್ ವಿತರಣೆ ಕಾರ್ಯಕ್ರಮ ನಡೆಯಿತು.
ಗುಂಡ್ಲುಪೇಟೆ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮಕ್ಕಳ ಅಳತೆಗೆ ತಕ್ಕಂತೆ ಕಸ್ಟಮೈಸ್ ವೀಲ್ ಚೇರ್‌ನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಕೆ ವಿ ರಾಜಣ್ಣ ಮಾಜಿ ರಾಜ್ಯ ಆಯುಕ್ತರು ಅಂಗವಿಕಲರ ಹಕ್ಕುಗಳ ಅಧಿನಿಯಮ ಕರ್ನಾಟಕ ಸರ್ಕಾರ ಹಾಗೂ ಮಾರ್ಗದರ್ಶಿ ಸಂಸ್ಥೆಯ ಯೋಜನ ನಿರ್ದೇಶಕರಾದ ಅಭಿಷೇಕ್, ವಲಯದ ಸ್ಥಾಪಕರು, ಮಾರ್ಗದರ್ಶಿ ಸಂಸ್ಥೆ. ಶ್ರೀನಿವಾಸ್ ಫಿಜಿಯೋಥೆರಪಿಸ್ಟ್ ಶ್ರೀಮತಿ ಜ್ಯೋತಿ ತಾಲೂಕು ಪುನಸ್ಚೇತನ ಕಾರ್ಯಕರ್ತರು. ಮೋಟಿವೇಶನ್ ಇಂಡಿಯಾ ಸಂಸ್ಥೆಯ ವತಿಯಿಂದ ಸುಧಾಕರ್, ಪ್ರವೀಣ್, ಪ್ರಶಾಂತ್, ದಿನೇಶ್, ತಾಲ್ಲೂಕು ವಿವಿದ್ದೋಷ ಪುನರ್ವಸತಿ ಕಾರ್ಯಕರ್ತರಾದ ಶ್ರೀಮತಿ ಮಂಜುಳಾ ರವರು ಹಾಗೂ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಯಾದಂತಹ ಶ್ರೀಮತಿ ಸರೋಜಾ ರವರು ಹಾಜರಿದ್ದರು.
ವರದಿ : ಸದಾನಂದ ಕಣ್ಣೇಗಾಲ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.