ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ೨೯ನೆಯ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಗುರು ಶಾಂತೇಶ್ವರ ದಾಸೋಹ ಮಂಟಪದಲ್ಲಿ ಆಯೋಜಿಸಲಾಗಿತ್ತು, ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಶ್ರೀ.ಎಚ್.ಆಂಜನೇಯ ರವರು ಭಾಗವಹಿಸಿ ಮಾತನಾಡಿ ಲಿಂಗೈಕ್ಯ ಹಿರಿಯ ಶ್ರೀ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಗಳು ಆಧುನಿಕ ಬಸವಣ್ಣ, ನಡೆದಾಡುವ ದೇವರು, ನಾಡಿನ ಜನರಿಗೆ ಶಿಕ್ಷಣ ಸಂಸ್ಥೆಗಳನ್ನು ತೆರೆದು ಶೈಕ್ಷಣಿಕ ಪ್ರಗತಿ ಸಾಧಿಸಲು ನೆರವಾದರು ಬ್ರಿಟೀಷರ ದಬ್ಬಾಳಿಕೆಯಲ್ಲಿ ಮಠಾಧೀಶರಾಗಿ ಬಂದು ಸಾಕಷ್ಟು ಸಾಧನೆ ಮಾಡಿದ್ದಾರೆ ಎಂದು ಸ್ಮರಿಸಿದರು.
ಜಗತ್ತಿನಲ್ಲಿ ಕಳೆದ ಎರಡು ವರ್ಷಗಳಿಂದ ಹೆಮ್ಮಾರಿ ಕೊರೋನಾದಿಂದ ಸಾಕಷ್ಟು ಸಾವು ನೋವು ಸಂಭವಿಸಿದ ದುಃಖದ ಮಧ್ಯದಲ್ಲಿ ಈಗಿನ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ತಮ್ಮ ಎಲ್ಲಾ ಕಾರ್ಯಕ್ರಮವನ್ನು ರದ್ದು ಮಾಡಿ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ತಲ್ಲಿನರಾದರು ಜೊತೆಗೆ ನಾಡುನುಡಿಯ ಚಿಂತನೆಯನ್ನು ಇಟ್ಟುಕೊಂಡು ಭರಮಸಾಗರದ ಸುತ್ತಮುತ್ತಲಿನ ೪೪ ಕೆರೆಗಳಿಗೆ ಏತನೀರಾವರಿ ಯೋಜನೆಯೂ ಅಪ್ಪರ್ ಭದ್ರದಿಂದ ಯಾವ ರೀತಿ ನೀರು ತುಂಬಿಸಬೇಕು ಎಂಬುದರ ಬಗ್ಗೆ ಚಿಂತನೆ ಮಾಡಿದ್ದರ ಫಲವಾಗಿ ಇದೀಗ ೪೪ ಕೆರೆಗಳಿಗೆ ಸುಮಾರು ೫೬ ಕಿಮೀ ನಿಂದ ೫ ಅಡಿ ವ್ಯಾಸವುಳ್ಳ ದೊಡ್ಡ ಪೈಪ್ ಲೈನ್ ಮೂಲಕ ನೀರು ತುಂಬಿಸುವ ಯೋಜನೆ ಇದೀಗ ಕಾರ್ಯರೂಪಕ್ಕೆ ಬಂದು ಅಂತಿಮ ಹಂತಕ್ಕೆ ಬಂದು ತಲುಪಿದೆ ಇದಕ್ಕೆ ಸ್ವಾಮೀಜಿಗಳ ತಮ್ಮ ಅನುಭವದ ತಂತ್ರಜ್ಞಾನವನ್ನು ಇಂಜಿನಿಯರ್‌ಗಳಿಗೆ ಧಾರೆ ಎರೆದಿದ್ದಾರೆ ಇಂತಹ ಶೈಕ್ಷಣಿಕ ಪ್ರಗತಿ ಹಾಗೂ ರೈತರ ಏಳಿಗೆಗೆ ಸದಾ ಶ್ರಮಿಸುತ್ತಿರುವ ಸ್ವಾಮೀಜಿಗಳ ಕಾರ್ಯ ಸ್ಮರಣೀಯವಾದದು ಎಂದರು.
ಕೊರೋನಾ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಬೆಡ್, ಚಿಕಿತ್ಸೆ ಇಲ್ಲದ ಸಮಯದಲ್ಲಿ ತಕ್ಷಣವೇ ಸಂಬAಧಿಸಿದವರಿಗೆ ಕರೆ ಮಾಡಿ ಸೌಲಭ್ಯಗಳನ್ನು ಕಲ್ಪಿಸಿ ಅವರಿಗೆ ನೆರವಾಗಿ ಸಹಸ್ರಾರು ಭಕ್ತರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಮಾದಿಗ ಸಮುದಾಯದ ನಮ್ಮಂತವರನ್ನು ದೂರು ಇಟ್ಟಿದ್ದ ಸಮಾಜದಲ್ಲಿ ನಮಗೆ ಅನ್ನ, ಆಶ್ರಯ, ವಿದ್ಯಾದಾನ ಮಾಡಿ, ಜಿ.ದುಗ್ಗಪ್ಪ ಅವರನ್ನು ನಾಲ್ಕು ಬಾರಿ ಶಾಸಕರನ್ನಾಗಿ ಮಾಡಿದ್ದಾರೆ ಶಿಕ್ಷಣದ ಜೊತೆಗೆ ಸಂಘಟನೆ ಮೂಲಕ ಸಮಾಜಕ್ಕೆ ಹೋರಾಟದ ಕಿಚ್ಚು ಹಬ್ಬಿಸಿದರು ಇಂತಹ ಸ್ವಾಮೀಜಿಗಳ ಸಾಧನೆಯ ಸಾಕಾರವನ್ನು ರಾಷ್ಟ್ರದ ಗಮನ ಸೆಳೆಯಲು ಕಾರಣವಾಗಿದೆ ಎಂದರು.
ಶ್ರೀ.ತರಳಬಾಳು ಜಗದ್ಗುರು ಶ್ರೀ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳವರು ಆಶೀರ್ವಚನ ನೀಡಿದರು ಸಾಣೇಹಳ್ಳಿ ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳವರು, ನಿವೃತ್ತ ಡಿಜಿಐಜಿಪಿ ಶಂಕರ್ ಬಿದರಿ, ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನೀಕೇರಿ, ವಿಶ್ರಾಂತ ಪ್ರಾಧ್ಯಾಪಕ ನಾ ಲೋಕೇಶ್ ಒಡೆಯರ್ ಉಪಸ್ಥಿತರಿದ್ದರು.
ವೆಂಕಟೇಶ್ ಕುಮಾರ್. ಜೆ ಎಂ
ಚಿತ್ರದುರ್ಗ ಜಿಲ್ಲೆ
More Stories
ಸಿರಸಿಯ ವಿಮಲಾ ಭಾಗ್ವತರವರಿಗೆ ಸಂತ ಶಿಶುನಾಳ ಶರೀಫ ಹಾಗೂ ಆಯ್ದಕ್ಕಿ ಲಕ್ಕಮ್ಮ ರಾಜ್ಯ ಪ್ರಶಸ್ತಿ