December 22, 2024

Bhavana Tv

Its Your Channel

ಜನತೆಯ ಆರ್ಶಿವಾದದಿಂದ ನಾನು ರಾಜಕಾರಣದಲ್ಲಿ ಸ್ಥಾನ ಪಡೆದಿದ್ದೇನೆ. -ಸಚೀವರಾದ ನಾರಾಯಣ ಗೌಡ

ಕೃಷ್ಣರಾಜಪೇಟೆ ಪಟ್ಟಣದ ಮಂಗಳವಾರ ಸಚೀವರ ನಿವಾಸದ ಆವರಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಚೀವರು
ಇಂದು ನಾನು ರಾಜಕೀಯವಾಗಿ ಯಾವುದೇ ಸ್ಥಾನಮಾನವನ್ನು ಪಡೆದಿದ್ದರೆ ಅದು ತಾಲ್ಲೂಕಿನ ಜನತೆ ನನಗೆ ನೀಡಿರುವ ಆಶೀರ್ವಾದದ ಫಲವಾಗಿದೆ. ಜನತೆ ನೀಡಿರುವ ಅಧಿಕಾರವನ್ನು ಜನತೆಯ ಸೇವೆಗೆ ಬಳಸುತ್ತೇನೆ. ನಾನು ಶಾಸಕ, ಸಚಿವ ಎನ್ನುವುದಕ್ಕಿಂತ ಮೊದಲು ತಾಲೂಕಿನ ಜನತೆಯ ವಿನಮ್ರ ಸೇವಕನಾಗಿದ್ದೇನೆ ಎಂದು ಸಚಿವ ನಾರಾಯಣಗೌಡ ಭಾವುಕರಾಗಿ ಹೇಳಿದರು

ಸಮಾಜಸೇವಕನಾಗಿದ್ದ ನಾನು ಹೊಟ್ಟೆಬಟ್ಟೆಗಾಗಿ ಮುಂಬೈಗೆ ಹೋಗಿ ೩೫ವರ್ಷಗಳ ಕಾಲ ಅಲ್ಲಿಯೇ ನೆಲೆಸಿದ್ದೆ. ನನ್ನ ತಾಯಿ ಜನ್ಮಭೂಮಿಯ ಸೇವೆ ಮಾಡು, ಊರಿಗೆ ಹೋಗಿ
ಬಡಜನರಿಗೆ ಸಹಾಯ ಮಾಡು ಎಂದು ಹೇಳಿದ ಹಿನ್ನೆಲೆಯಲ್ಲಿ ನನ್ನ ತಂದೆತಾಯಿಗಳಾದ ಪುಟ್ಟಮ್ಮಚಿಕ್ಕೇಗೌಡರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಸಮಾಜಸೇವೆ ಆರಂಭಿಸಿ, ತಾಲ್ಲೂಕಿನ
ಜನತೆಯ ಆಶೀರ್ವಾದದ ಫಲದಿಂದ ಮೂರು ಭಾರಿ ಶಾಸಕನಾಗಿ ಆಯ್ಕೆಯಾಗಿ ನಾಡಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರ ಆಶೀರ್ವಾದದಿಂದ ಪೌರಾಢಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸೇರಿದಂತೆ ಮೂರು ಪ್ರಮುಖ ಖಾತೆಗಳಿಗೆ ಸಚಿವನಾಗಿದ್ದೇನೆ. ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನ ನಡೆಯುತ್ತಿರುವುದರಿಂದ ನಾನು ನನ್ನ ಮೊಬೈಲ್ ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ದಯಮಾಡಿ ಕಾರ್ಯಕರ್ತರು ಯಾರೂ ಬೇಸರ ಮಾಡಿಕೊಳ್ಳಬಾರದು ಎಂದು ಕೈಮುಗಿದು ಮನವಿ ಮಾಡಿದ ಸಚಿವರು ಕೆ.ಆರ್.ಪೇಟೆ ಪಟ್ಟಣವನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತೇನೆ. ನನ್ನದು ಅಭಿವೃದ್ಧಿಯ ಮೂಲಮಂತ್ರ, ಅಭಿವೃದ್ಧಿ ಕೆಲಸ ಕಾರ್ಯಗಳ ಮೂಲಕ ಉತ್ತರ ನೀಡುತ್ತೇನೆ ಎಂದು ಸಚಿವ ನಾರಾಯಣಗೌಡ ತಮ್ಮ ರಾಜಕೀಯ ವಿರೋಧಿಗಳಿಗೆ ಸವಾಲು ಹಾಕಿದರು…

ತಾಲ್ಲೂಕು ಬಿಜೆಪಿ ಅಧ್ಯಕ್ಷ ಬೂಕಹಳ್ಳಿ ಮಂಜು ಸಮಾವೇಶವನ್ನು ಉದ್ಘಾಟಿಸಿದರು.ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತ ಮಾಜಿಉಪಾಧ್ಯಕ್ಷ ಎಸ್.ಅಂಬರೀಶ್, ಜಿಪಂ ಮಾಜಿಸದಸ್ಯ ಎಸ್.ಮಂಜುನಾಥ್ ಸಭೆಯಲ್ಲಿ ಸಚೀವರಿಗೆ ಕ್ಷೇತ್ರದ ಹಲವು ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದ ಕೆಲವು ಸಮಸ್ಯೆಗಳಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಮನ್ಮುಲ್ ನಿರ್ದೇಶಕ ಕೆ.ಜೆ.ತಮ್ಮಣ್ಣ, ತಾ.ಪಂ ಮಾಜಿಅಧ್ಯಕ್ಷ ಬಿ.ಜವರಾಯಿಗೌಡ, ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಮಾಜಿಅಧ್ಯಕ್ಷ ಚನ್ನಿಂಗೇಗೌಡ, ತಾಲ್ಲೂಕು ಭ್ರಷ್ಟಾಚಾರ ವಿರೋಧಿ ಜಾಗೃತ ಸಮಿತಿಯ ಅಧ್ಯಕ್ಷ ಗೂಡೇಹೊಸಳ್ಳಿ ಜವರಾಯಿಗೌಡ, ಕೆ.ವಿ.ಅರುಣಕುಮಾರ್, ಜೇಟುಸಿಂಗ್ ರಾಜಪುರೋಹಿತ್, ಕೆ.ಎಸ್.ರಾಮೇಗೌಡ, ಕೆ.ಆರ್. ಹೇಮಂತಕುಮಾರ್, ಬೂಕಹಳ್ಳಿ ಹರೀಶ್, ಶೀಳನೆರೆ ಭರತ್ ಕುಮಾರ್ ಸೇರಿದಂತೆ ನೂರಾರು ಜನರು ಸಭೆಯಲ್ಲಿ ಭಾಗವಹಿಸಿದ್ದರು…

error: