September 17, 2024

Bhavana Tv

Its Your Channel

ಹೊನ್ನಾವರ ತಾಲೂಕಿನ ಹಳದಿಪುರ ಕಡಲತೀರದಲ್ಲಿ ಅಪರೂಪದ ಆಮೆ ಮರಿಗಳು ಬಿಡಲಾಯಿತು.

ಅಳಿವಿನಂಚಿನಲ್ಲಿರುವÀ ಸಂತತಿಯ ಉಳಿವಿಗೆ ವಿಶಿಷ್ಠ ಪ್ರಯತ್ನಕ್ಕೆ ಅರಣ್ಯ ಇಲಾಖೆ ಮುಂದಾಗಿದ್ದು ಹೊನ್ನಾವರ ತಾಲೂಕಿನ ಹಳದಿಪುರ ಕಡಲತೀರದಲ್ಲಿ ಅಪರೂಪದ ಆಮೆ ಮರಿಗಳು ಬಿಡಲಾಯಿತು.
ಹಳದಿಪುರ ಸಮುದ್ರತೀರದಲ್ಲಿರುವ ಕಡಲಾಮೆ ಸಂರಕ್ಷಣಾ ಕ್ಷೇತ್ರದಲ್ಲಿ ಮೊಟ್ಟೆಗಳಿಂದ ಹೊರಬಂದ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಇಲಕೆಯ ಅಧಿಕಾರಿಗಳು ಕಡಲಿಗೆ ಬಿಡುವ ಮೂಲಕ ಪ್ರಾಣಿಗಳ ಚಲನವಲನದ ಬಗ್ಗೆ ಮಹಿತಿ ನೀಡಿದರು. ಕಳೆದ ೫೨ ದಿನಗಳಿಂದ ಸಂರಕ್ಷಿಸಿದ ಕಡಲಾಮೆಯ ಮೊಟ್ಟೆಗಳಿಂದ ಹೊರಬಂದ ೬೦ ಕ್ಕೂ ಹೆಚ್ಚು ಮರಿಗಳನ್ನು ಸಮುದ್ರಕ್ಕೆ ಬಿಡುವ ಕಾರ್ಯಕ್ರಮಕ್ಕೆ ಹೊನ್ನಾವರ ಜೆ.ಎಮ್.ಎಪ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮಧುಕರ ಪಿ ಭಾಗ್ವತ ಅವರು ಚಾಲನೆ ನೀಡಿ ಇಲಾಖೆಯ ಕಾರ್ಯವನ್ನು ಪ್ರಶಂಸಿಸಿ ಅರಣ್ಯ ಸಿಬ್ಬಂದಿಗಳು, ಮಾರ್ಥೋಮಾ ಶಾಲೆಯ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾದ ಕೆ.ಟಿ ಬೋರಯ್ಯ ಹಾಗೂ ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ ಪ್ರಾತ್ಯಕ್ಷಿಕೆಯ ಮೂಲಕ ಕಡಲಾಮೆ, ಮೊಟ್ಟೆಗಳು ಹಾಗೂ ಕಡಲಾಮೆಯ ಸಂರಕ್ಷಣೆಯ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ರಾಜು ನಾಯ್ಕ, ತುಕಾರಾಮ ಕೋಟುರ್, ಕಡಲಾಮೆ ಗೂಡು ಕಾವಲುಗಾರ ಕನ್ನ ಹರಿಕಂತ ಹಾಜರಿದ್ದರು.
ಜೀವ ವೈವಿದ್ಯ ಸಂರಕ್ಷಣೆಯ ಕಾರ್ಯಸೂಚಿಯಂತೆ ಹೊನ್ನಾವರ ಅರಣ್ಯ ವಿಭಾಗದಲ್ಲಿ ಕಳೆದ ೧೫ ವರ್ಷಗಳಿಂದ ಕಡಲಾಮೆ ಸಂರಕ್ಷಣೆ ನಡೆಯುತ್ತಿದೆ. ಸಮುದ್ರ ತೀರದಲ್ಲಿ ಕಡಲಾಮೆಗಳು ಇಟ್ಟ ಮೊಟ್ಟೆಯ ಗೂಡು ನಾಯಿ, ಪಕ್ಷಿಗಳು ಇತ್ಯಾದಿ ಪ್ರಾಕೃತಿಕ ದಾಳಿಯಿಚಿದ ಹಾನಿಗೊಳಗಾಗುವುದನ್ನು ತಡೆಯಲು ಸ್ಥಳೀಯರಲ್ಲಿ ಅರಿವು ಮೂಡಿಸಲಾಗಿದೆ. ಕಡಲಾಮೆ ಮೊಟ್ಟೆಗಳನ್ನು ಕಂಡ ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡುತ್ತಿದ್ದು ಇಲಾಖೆಯವರು ಮೊಟ್ಟೆಗಳನ್ನು ರಕ್ಷಿಸಿ ಮರಿ ಮಾಡಿ ಸಮುದ್ರಕ್ಕೆ ಬಿಡುತ್ತಾ ಬಂದಿದ್ದಾರೆ.

ಇಲ್ಲಿನ ಕಡಲಾಮೆಗಳು ನಶಿಸಿ ಹೋಗುತ್ತಿರುವ ಆಲಿವ್ ರಿಡ್ಲೇ ಸಂತತಿಗೆ ಸೇರಿದ್ದಾಗಿವೆ. ಕಡಲಾಮೆ ಮೊಟ್ಟೆಗಳನ್ನು ಹುಡುಕಿ ಕೊಟ್ಟವರಿಗೆ ಪ್ರತಿ ಗೂಡಿಗೆ ೬೦೦ ರುಪಾಯಿ ಪ್ರೋತ್ಸಾಹ ಧನವನ್ನೂ ಇಲಾಖೆಯಿಂದ ನೀಡುತ್ತಾರೆ. ಪ್ರಸ್ತುತವರ್ಷ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ.ಕೆ ಅವರ ಮಾರ್ಗದರ್ಶನದಲ್ಲಿ ಹಿರೇಗುತ್ತಿ, ಹಳದಿಪುರ, ಕಾಸರಕೋಡ, ಮಂಕಿ, ಅಪ್ಸರಕೊಂಡ ಮೊದಲಾದ ಕಡೆ ಕಡಲಾಮೆ ಮೊಟ್ಟೆಗಳನ್ನು ಸಂರಕ್ಷಿಸಿ ಮರಿ ಮಾಡಿ ಸಮುದ್ರಕ್ಕೆ ಬಿಡಲಾಗುತ್ತಿದೆ.

error: