December 22, 2024

Bhavana Tv

Its Your Channel

ತಾಲೂಕಿನಲ್ಲಿ ಕಾನೂನು ಸಾಕ್ಷರತ ರಥ ಹಾಗೂ ಜನತಾ ನ್ಯಾಯಾಲಯ ಕಾರ್ಯಕ್ರಮ ಸಂಪನ್ನ

ಭಟ್ಕಳ ತಾಲೂಕಿನಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರ ಕಾರವಾರ, ತಾಲೂಕಾ ಕಾನೂನು ಸೇವಾ ಸಮಿತಿ ಭಟ್ಕಳ. ವಕೀಲ ಸಂಘ ಭಟ್ಕಳ, ಅಭಿಯೋಜನಾ ಇಲಾಖೆ, ಶಿಕ್ಷಣ ಇಲಾಖೆ ಭಟ್ಕಳ, ಪಂಚಾಯತ ರಾಜ್ ಇಲಾಖೆ, ಕಂದಾಯ ಇಲಾಖೆ ಹಾಗೂ ಇನ್ನಿತರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಕಾನೂನು ಸಾಕ್ಷರತ ರಥ ಮತ್ತು ಜನತ ನ್ಯಾಯಾಲಯ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ಜಡ್ಜ್ ಜಗದೀಶ ಬಿ. ಶಿವಪೂಜೆ ಅವರು ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದು ನಾವೆಲ್ಲಾ ಸೇರಿ ಸಾರ್ವಜನಿಕರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ತಾಲೂಕಿನ ವಿವಿಧ ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವಂತ ಕೆಲಸವನ್ನು ಮಾಡುತ್ತಿದ್ದೇವೆ. ನಮ್ಮ ಉದ್ದೇಶ ಮುಂದಿನ ಭಾವಿ ಪ್ರಜೆಗಳಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವುದಾಗಿದೆ.
ಈ ಸಂದರ್ಭದಲ್ಲಿ ಭಟ್ಕಳ ವಕೀಲ ಸಂಘದ ಅಧ್ಯಕ್ಷರಾದ ಆರ್. ಆರ್.ಶ್ರೇಷ್ಠಿ ಅವರು ಮಾತನಾಡಿ ಇಂದು ನಾವು ಮಾನ್ಯ ಹಿರಿಯ ಸಿವಿಲ್ ಜಡ್ಜ್ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಜಗದೀಶ ಬಿ. ಶವಪೂಜೆ ಅವರ ನೇತ್ರತ್ವದಲ್ಲಿ ವಿಧ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ಶಾಲಾ ಕಾಲೇಜುಗಳಲ್ಲಿ ಕಾನೂನು ಸಾಕ್ಷರತ ಮತ್ತು ಜನತಾ ನ್ಯಾಯಾಲಯ ಎಂಬ ಕಾರ್ಯಕ್ರಮವನ್ನು ನಡೆಸುತ್ತಿದೇವೆ. ಇದರ ಉದೇಶ ಸಾಮಾನ್ಯ ಜನರಲ್ಲಿ ಮತ್ತು ವಿಧ್ಯಾರ್ಥಿಗಳಲ್ಲಿ ಕಾನೂನು ಅರಿವು ಮೂಡಿಸುವುದಾಗಿದೆ.
ಸಾಭಾಕಾರ್ಯಕ್ರಮಕ್ಕೂ ಮೊದಲು ಕಾನೂನು ಸಾಕ್ಷರತ ರಥಕ್ಕೆ ಹಿರಿಯ ಸಿವಿಲ್ ಜಡ್ಜ್ ಜಗದೀಶ ಬಿ. ಶಿವಪೂಜೆ ಮತ್ತು ಪ್ರಧಾನ ಸಿವಿಲ್ ಜಡ್ಜ್ ಕೃಷ್ಣ ರಾಜ ಕೆ ಇವರು ಹಸಿರು ಬವುಟವನ್ನು ತೋರಿಸುವುದರೋಂದಿಗೆ ಚಾಲನೆ ನೀಡಿದರು.
ನಂತರ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೋನಾರಕೇರಿ ಮತ್ತು ಭಟ್ಕಳ ತಾಲೂಕ ಪಂಚಾಯತ್ ಆವರಣದಲ್ಲಿ ಕಾನೂನು ಸಾಕ್ಷರತೆಯ ಬಗ್ಗೆ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಸಿವಿಲ್ ಜಡ್ಜ್ ನಾಗೇಂದ್ರ ಸಹಾಯಕ ಸರ್ಕಾರಿ ಅಭ್ಯೊಜಕರಾದ ಶ್ರೀಮತಿ ಇಂದಿರಾ ನಾಯ್ಕ ಮತ್ತು ಸಂಪನ್ನೂಲ ವ್ಯಕ್ತಿಗಳಾಗಿ ವಕೀಲರಾದ ಎಸ್ ಜೆ ನಾಯ್ಕ ಮತ್ತು ಸಂತೋಷ ನಾಯ್ಕ ಉಪಸ್ಥಿತರಿದ್ದರು.

error: